ದುಬೈ: ಭಾನುವಾರ ದುಬೈನಲ್ಲಿ(Dubai) ನಡೆದ ಏಷ್ಯಾ ಕಪ್ 2022ರ(Asia Cup 2022) ಫೈನಲ್‌ನಲ್ಲಿ ಶ್ರೀಲಂಕಾ(Sri Lanka) ತಂಡ ಪಾಕಿಸ್ತಾನವನ್ನು ಸೋಲಿಸಿತು. ಈ ಗೆಲುವಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ(MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ 2021ರ ಐಪಿಎಲ್ ಗೆಲುವೇ ಸ್ಫೂರ್ತಿ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ(Dasun Shanaka) ತಿಳಿಸಿದ್ದಾರೆ.
Advertisement
ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶನಕ ಬಹಿರಂಗಪಡಿಸಿದ್ದಾರೆ. ಇದೀಗ ನಾವು ಏಷ್ಯಾಕಪ್ ಗೆದ್ದಿದ್ದೇವೆ. ನಮ್ಮ ಈ ಗೆಲುವನ್ನು ನಮ್ಮ ದೇಶಕ್ಕೆ ಅರ್ಪಿಸಲು ಬಯಸುತ್ತೇವೆ ಎಂದು ಶನಕ ಪಂದ್ಯದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ
Advertisement
Advertisement
ಭಾನುವಾರ ಪಾಕಿಸ್ತಾನ ಹಾಗೂ ಶ್ರೀಲಂಕಾದ ನಡುವಿನ 15ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Advertisement
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಯಾರೂ ನಿರೀಕ್ಷೆ ಮಾಡಿರದಂತಹ ಆಟವನ್ನು ಆಡಿ ಕ್ರಿಕೆಟ್ ಪ್ರಿಯರ ಮನಗೆದ್ದಿತು. ಶ್ರೀಲಂಕಾ ನೀಡಿದ 172 ರನ್‌ಗಳ ಟಾರ್ಗೆಟ್ ಅನ್ನು ಹಿಂದಿಕ್ಕಲಾಗದೇ 147 ರನ್‌ಗಳ ಮೂಲಕ ಪಾಕಿಸ್ತಾನ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ