ಕೊಲಂಬೋ: ಶ್ರೀಲಂಕಾ ಪ್ರವಾಸಗೊಂಡಿರುವ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಜೊತೆಗೆ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಫೀಲ್ಡರ್ ಡೇವಿಡ್ ವಾರ್ನರ್ ಪ್ಯಾಂಟಿಗೆ ಬೇಲ್ಸ್ ಬಡಿದ ಪ್ರಸಂಗ ನಡೆದಿದೆ.
Advertisement
3ನೇ ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶ್ರೀಲಂಕಾದ ಬ್ಯಾಟ್ಸ್‌ಮ್ಯಾನ್ ಜೆಫ್ರಿ ವಾಂಡರ್ಸೆ ಆಸ್ಟ್ರೇಲಿಯಾದ ಬೌಲರ್ ಟ್ರಾವಿಸ್ ಹೆಡ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಸ್ಲಿಪ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ಬಾಲ್ ಕ್ಯಾಚ್ ಪಡೆಯಲು ಮುಂದಾದರು. ಆಗ ಬೇಲ್ಸ್ ವಾರ್ನರ್ ಪ್ಯಾಂಟಿಗೆ ಬಡಿದು ದಿಢೀರ್ ಆಗಿ ಮೈದಾನಕ್ಕೆ ಬಿದ್ದು ನೋವಿನಿಂದ ನರಳಾಡಿದರು. ನಂತರ ನೋವು ನಿವಾರಣೆಗೊಂಡು ಫೀಲ್ಡಿಂಗ್ ಮುಂದುವರಿಸಿದರು. ಇದನ್ನೂ ಓದಿ: ಭಾರತ Vs ಇಂಗ್ಲೆಂಡ್ ಟೆಸ್ಟ್ – ಮತ್ತೆ ಸುದ್ದಿಯಾದ ಜಾರ್ವೋ 69
Advertisement
ಇದೀಗ ವಾರ್ನರ್ ಪ್ಯಾಟಿಂಗೆ ಬಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 3ನೇ ದಿನದಾಟದಲ್ಲಿ 10 ವಿಕೆಟ್‍ಗಳ ಅಂತರದ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
Advertisement
https://twitter.com/hemantbuch/status/1542757609106591744
Advertisement
ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್‍ಗಳಿಗೆ ಆಲೌಟ್ ಆಯಿತು. ನಂತರ ಆಸ್ಟ್ರೇಲಿಯಾ 321 ರನ್ ಬಾರಿಸಿ 109 ರನ್‍ಗಳ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯ ಇನ್ನಿಂಗ್ಸ್‍ನಲ್ಲಿ 113 ರನ್‍ಗಳಿಗೆ ಶ್ರೀಲಂಕಾ ಆಲೌಟ್ ಆಗಿ ಕೇವಲ 5 ರನ್‍ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್‍ನ್ನು ವಾರ್ನರ್ ಮೊದಲ ಓವರ್‌ನ ನಾಲ್ಕು ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸ್ ಸಹಿತ 10 ಬಾರಿಸಿ ಆಸ್ಟ್ರೇಲಿಯಾಗೆ 10 ವಿಕೆಟ್‍ಗಳ ಜಯ ತಂದು ಕೊಟ್ಟರು. ಇದನ್ನೂ ಓದಿ: ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!