ಕೊಲಂಬೋ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಜನರು ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಶನಿವಾರ ಸಾವಿರಾರು ಪ್ರತಿಭಟನಾಕಾರರು ರಾಜಪಕ್ಸೆಯವರ ನಿವಾಸಕ್ಕೆ ಮುತ್ತಿಗೆ ಹಾಕಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ್ದಾರೆ.
Advertisement
ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಇಂದು ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ, ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜ, ಹೆಲ್ಮೆಟ್‌ಗಳನ್ನು ಹಿಡಿದುಕೊಂಡು ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್
Advertisement
Protesters seen having a swim at the President’s house in Srilanka ????
— Aditya Raj Kaul (@AdityaRajKaul) July 9, 2022
Advertisement
ರಾಜಪಕ್ಸೆ ವಿರುದ್ಧ ಘೋಷಣೆ ಕೂಗಿರುವ ಜನರು ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದಾರೆ. ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ಈಜಾಡಿದ್ದಾರೆ. ಸೋಫಾ, ಬೆಡ್‌ಗಳ ಮೇಲೆ ಕುಣಿದಾಡಿದ್ದಾರೆ. ಅಡುಗೆ ಮನೆಗೂ ನುಗ್ಗಿ, ಹಸಿವನ್ನು ನೀಗಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಮಾಡಿ ಆನಂದಿಸಿದ್ದಾರೆ.
Advertisement
ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಶುಕ್ರವಾರ ತಮ್ಮ ಸುರಕ್ಷತೆಗಾಗಿ ನಿವಾಸದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇಂದಿನ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 21 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ
Protestors inside President’s House #SriLanka #SriLankaProtests pic.twitter.com/c1waEZ5zMM
— Jamila Husain (@Jamz5251) July 9, 2022
ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಿಂಹಳದಲ್ಲಿ 2.2 ಕೋಟಿ ಜನರು ಹೋರಾಡುತ್ತಿದ್ದಾರೆ. ಇಂಧನ, ಆಹಾರ, ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆ ಉಂಟಾಗಿದ್ದು, ಜನರು ಸಾವು ಬದುಕಿನ ನಡುವೆ ಹೆಣಗಾಡುತ್ತಿದ್ದಾರೆ.