ಔಷಧಿಯ ಮೇಲಿನ ದರ ಶೇ.40 ರಷ್ಟು ಏರಿಸಿದ ಲಂಕಾ ಸರ್ಕಾರ

Public TV
1 Min Read

ಕೊಲಂಬೊ: ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿರುವ ಶ್ರೀಲಂಕಾ, ತನ್ನ ರಾಷ್ಟ್ರದ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಔಷಧಿಗಳ ಮೇಲಿನ ದರವೂ ಶೇ.40 ರಷ್ಟು ಏರಿಕೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ.

srilanka

ಈಗಾಗಲೇ ಇಂಧನ ಕೊರತೆ, ವಿದ್ಯುತ್ ಸಂಪರ್ಕ ಕಡಿತ, ನಿರುದ್ಯೋಗ ಸಮಸ್ಯೆ ಹಾಗೂ ಔಷಧಗಳ ಕೊರತೆ ಜನರನ್ನು ಬಾಧಿಸುತ್ತಿದೆ. ಇದರಿಂದಾಗಿ ಶ್ರೀಲಂಕಾ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ ಔಷಧಿಗಳ ಬೆಲೆ ಏರಿಕೆ ಮಾಡಿರುವುದನ್ನು ಸಂಕಷ್ಟಕ್ಕೆ ದೂಡಿದೆ. ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

ಕೆಲ ಆಸ್ಪತ್ರೆಗಳಲ್ಲಿ ಅರಿವಳಿಕೆ ಔಷಧ ಖಾಲಿಯಾಗಿದ್ದು, ಸಾಮಾನ್ಯ ಶಸ್ತ್ರಚಿಕಿತ್ಸೆಗಳು ರದ್ದುಗೊಂಡಿವೆ. ಹಾಗಾಗಿ ಸರ್ಕಾರ ಔಷಧಿಯ ದರವನ್ನು ಶೇ.40 ರಷ್ಟು ಹೆಚ್ಚಿಸುವುದಾಗಿ ಆದೇಶಿಸಿದ್ದು, ಇದು ಕೊರತೆಯಿರುವ 60 ಔಷಧಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

SRILANKA (1)

ಆಂಟಿಬಯೋಟಿಕ್ಸ್, ನೋವು ನಿವಾರಕ ಮಾತ್ರೆ, ಹೃದ್ರೋಗ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳೆಲ್ಲವೂ ಬೆಲೆ ಏರಿಕೆಗೆ ಒಳಪಟ್ಟಿರುತ್ತವೆ ಎಂದು ಆರೋಗ್ಯ ಸಚಿವ ಚನ್ನ ಜಯಸುಮನ ಹೇಳಿದ್ದಾರೆ. ಇದನ್ನೂ ಓದಿ: ಕಾಬೂಲ್ ಮಸೀದಿಯಲ್ಲಿ ಸ್ಫೋಟ – 50ಕ್ಕೂ ಹೆಚ್ಚು ಮಂದಿ ಸಾವು

ಕಳೆದ 6 ವಾರಗಳಲ್ಲಿ ಇದು 2ನೇ ಬಾರಿಗೆ ಔಷಧಗಳ ಬೆಲೆ ಏರಿಕೆಯಾಗಿದೆ. ಮಾರ್ಚ್ ಮಧ್ಯಂತರದಲ್ಲಿ ಶೇ.30 ಪ್ರತಿಶತದಷ್ಟು ಬೆಲೆ ಏರಿಕೆ ವಿಧಿಸಲಾಗಿತ್ತು. ಡಿಸೆಂಬರ್‌ನಿಂದ ದ್ವಿಗುಣಗೊಳಿಸಿರುವ ಇಂಧನಗಳ ಬೆಲೆ ಏರಿಕೆಯನ್ನು ಸರಿದೂಗಿಸಲು ಬೆಲೆ ಏರಿಕೆ ಅಗತ್ಯವೆಂದು ಉದ್ಯಮಿಗಳು ತಿಳಿಸಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *