ಬೀಜಿಂಗ್: ಆರ್ಥಿಕ ದಿವಾಳಿಯನ್ನು ಅನುಭವಿಸುತ್ತಿರುವ ದ್ವೀಪ ರಾಷ್ಟ್ರದಿಂದ 1,00,000 ಅಳಿವಿನಂಚಿನಲ್ಲಿರುವ ಕೋತಿಗಳನ್ನು (Monkey) ಚೀನಾಕ್ಕೆ (China) ರಫ್ತು ಮಾಡುತ್ತಿರುವುದಾಗಿ ಶ್ರೀಲಂಕಾ (Sri Lanka) ತಿಳಿಸಿದೆ.
ಈ ಬಗ್ಗೆ ಶ್ರೀಲಂಕಾದ ಕೃಷಿ ಸಚಿವಾಲಯದ ಉನ್ನತ ಅಧಿಕಾರಿ ಮಾತನಾಡಿ, ಚೀನಾ ದೇಶವು 1 ಲಕ್ಷ ಕೋತಿಗಳ ಆಮದಿಗೆ ಬೇಡಿಕೆ ಇಟ್ಟಿದೆ. ಎಲ್ಲಾ ಕೋತಿಗಳನ್ನು ರಫ್ತು ಮಾಡಲು ಒಪ್ಪಿಗೆ ನೀಡಿದ್ದೇವೆ. ಆದರೆ 1 ಲಕ್ಷ ಕೋತಿಗಳನ್ನು ಒಂದೇ ಪ್ರದೇಶದಿಂದ ಚೀನಾಕ್ಕೆ ಕಳುಹಿಸುತ್ತಿಲ್ಲ. ಅದರ ಬದಲಾಗಿ ದೇಶದ ಹಲವಾರು ಭಾಗಗಳಲ್ಲಿ ಮಂಗಗಳಿಂದ ಹಾನಿ ಉಂಟಾಗುತ್ತಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸುತ್ತೇವೆ. ಅವುಗಳಿಂದ ಯಾವುದೇ ಹಾನಿ ಇರದ ಪ್ರದೇಶದಿಂದ ರಫ್ತು ಮಾಡುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಚೀನಾ ದೇಶ ನೀಡಿರುವ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ದೇಶಕ್ಕೆ ಚೀನಾ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, 1,000 ಚೀನೀ ಮೃಗಾಲಯಕ್ಕೆ 1 ಲಕ್ಷ ಕೋತಿಗಳನ್ನು ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಿದೆ. ಪರಿಸರವಾದಿಗಳ ತೀವ್ರ ಹೋರಾಟದ ನಡುವೆಯೂ ಚೀನಾದ ಬೇಡಿಕೆಗೆ ಶ್ರೀಲಂಕಾ ಒಪ್ಪಿಗೆ ಸೂಚಿಸಿದೆ.
Advertisement
Advertisement
ಟೋಕ್ ಮಕಾಕ್ ಎಂಬ ತಳಿಯ ಕೋತಿಗಳು ಅಳುವಿನಂಚಿನಲ್ಲಿದ್ದು, ಇದನ್ನು ಹೆಚ್ಚಾಗಿ ಶ್ರೀಲಂಕಾದಲ್ಲಿ ಮಾತ್ರ ಕಾಣಬಹುದಾಗಿದೆ. ಹೀಗಾಗಿ ಈ ಕೋತಿಗಳನ್ನು ಅಳುವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ನಿರ್ದಿಷ್ಟ ಜಾತಿಯ ಕೋತಿಗಳು ಶ್ರೀಲಂಕಾದಲ್ಲಿ ಮಾತ್ರ ಇದ್ದು, ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಕೆಂಪು ಪಟ್ಟಿಯಲ್ಲಿ ಈ ಜಾತಿಯ ಕೋತಿಗಳಿವೆ. ಇದನ್ನೂ ಓದಿ: ಕಾಂಗ್ರೆಸ್‌ನ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ: ಕರಂದ್ಲಾಜೆ ದೂರು
ಕೊಲಂಬೊದಲ್ಲಿರುವ ಚೀನಾದ ರಾಯಭಾರ ಕಚೇರಿಯು, ಟೋಕ್ ಮಕಾಕ್ ತಳಿಯ ಕೋತಿಗಳೇ ಬೇಕು ಎಂದು ಕೇಳುತ್ತಿಲ್ಲ. ಆದರೆ, ಯಾವುದೇ ತಳಿಯ ಕೋತಿಗಳನ್ನಾದರೂ ರಫ್ತು ಮಾಡಿ ಎಂದು ಬೇಡಿಕೆ ಇಟ್ಟಿದೆ. ಒಟ್ಟು 1 ಲಕ್ಷ ಕೋತಿಗಳನ್ನು ಚೀನಾದ 1 ಸಾವಿರ ಪ್ರಾಣಿ ಸಂಗ್ರಹಾಲಯಗಳಲ್ಲಿ ಇರಿಸಲು, ಪ್ರದರ್ಶನ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ಆದರೆ, ಈ ಕೋತಿಗಳನ್ನು ಆಹಾರವನ್ನಾಗಿ ಸೇವಿಸುವ ಉದ್ದೇಶದಿಂದ ಅಥವಾ ಪ್ರಯೋಗಾಲಯಗಳಲ್ಲಿ ಬಳಕೆ ಮಾಡಲು ಅಗತ್ಯವಿದೆ ಎಂದು ಚೀನಾ ಹೇಳಿಲ್ಲ. ಇದನ್ನೂ ಓದಿ: ಮತ್ತೆ ಗೆಲ್ತಾರಾ ತಿಪ್ಪಾ ರೆಡ್ಡಿ – ಚಿತ್ರದುರ್ಗ ಅಖಾಡ ಹೇಗಿದೆ?