ಕನ್ನಡದ ನಟಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಇದೆ. ನಟನೆಗೂ ಸೈ, ಡ್ಯಾನ್ಸ್‌ಗೂ ಜೈ ಎನ್ನುತ್ತಾ ಚಿತ್ರರಂಗದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಶ್ರೀಲೀಲಾ ಸೊಂಟ ಬಳುಕಿಸಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ನಟಿಯ ಅಫಿಷಿಯಲ್ ಪೋಸ್ಟರ್ ರಿಲೀಸ್ ಆಗಿದೆ. ಇದನ್ನೂ ಓದಿ:ಈ ವಾರ ಎಲಿಮಿನೇಟ್ ಆಗೋದು ಯಾರು?: ದೊಡ್ಮನೆಯಲ್ಲಿ ಬಿಗ್ ಟ್ವಿಸ್ಟ್
ನಮ್ಮ ತಂಡಕ್ಕೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾಗೆ ಸ್ವಾಗತ ಅಂತ ನಟಿಯ ಪೋಸ್ಟರ್ ಶೇರ್ ಮಾಡಿ ‘ಪುಷ್ಪ 2’ ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಪೋಸ್ಟರ್‌ನಲ್ಲಿ ಕನ್ನಡತಿ ಶ್ರೀಲೀಲಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಕ್ ಎಂಬ ಹಾಡಿಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದಾರೆ. ಇನ್ನೂ ಈ ಹಾಡು ರಿಲೀಸ್ ಆಗಬೇಕಿದೆ. ಸದ್ಯ ಈ ಪೋಸ್ಟರ್‌ನಿಂದ ಶ್ರೀಲೀಲಾ ಭಾರೀ ಸದ್ದು ಮಾಡುತ್ತಿದ್ದಾರೆ.
ಇನ್ನೂ ನಿನ್ನೆಯಷ್ಟೇ (ನ.9) ಶ್ರೀಲೀಲಾ ‘ಪುಷ್ಪ 2’ ಸೆಟ್‌ನಲ್ಲಿರುವ ಫೋಟೋ ಲೀಕ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಸಿನಿಮಾದ ಮೊದಲ ಭಾಗದಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಇದೀಗ ‘ಪುಷ್ಪ 2’ನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿರೋದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಈ ಹಿಂದೆ ಸಮಂತಾ (Samantha) ಮಾಡಿದ್ದ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿತ್ತು. ಹಾಗಾಗಿ ಸಮಂತಾಗೆ ಕನ್ನಡದ ನಟಿ ಠಕ್ಕರ್ ಕೊಡುತ್ತಾರಾ? ಕಾಯಬೇಕಿದೆ.
View this post on Instagram
ಇನ್ನೂ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಇದೇ ಡಿಸೆಂಬರ್ 5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಬೇಕಿದೆ.