ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

Advertisements

ನ್ನಡದ ಬ್ಯೂಟಿ ಶ್ರೀಲೀಲಾಗೆ ಟಾಲಿವುಡ್ ಸೂಪರ್‌ಸ್ಟಾರ್ ಜೊತೆ ನಟಿಸುವ ಅದೃಷ್ಟ ಖುಲಾಯಿಸಿದೆ. ಕನ್ನಡದ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವಾಗಲೇ ಸೌತ್‌ನಿಂದ ಸಾಲು ಸಾಲು ಸಿನಿಮಾಗಳಿಗೆ ಆಫರ್‌ಗಳು ಅರಸಿ ಬರುತ್ತಿದೆ. ಸದ್ಯ ನಂದಮೂರಿ ಬಾಲಕೃಷ ಅವರ ಜೊತೆ ಕಾಣಿಸಿಕೊಳ್ಳುವ ಅವಕಾಶ ನಟಿ ಶ್ರೀಲೀಲಾ ಗಿಟ್ಟಿಸಿಕೊಂಡಿದ್ದಾರೆ.

Advertisements

ಕನ್ನಡದ ಕಿಸ್, ಭರಾಟೆ, ಬೈ ಟು ಲವ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟಿ ಶ್ರೀಲೀಲಾ, ಅದ್ಯಾವಾಗ ತೆಲುಗಿನ ಲೆಜೆಂಡರಿ ಡೈರೆಕ್ಟರ್ ರಾಘವೇಂದ್ರ ರಾವ್ ಅವರ ಕಣ್ಣಿಗೆ ಬಿದ್ರೋ ಅಲ್ಲಿಂದ ಅದೃಷ್ಟನೇ ಚೇಂಜ್ ಆಯ್ತು. `ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟಿಸಿದ ಮೊದಲ ಚಿತ್ರ ಅಷ್ಟೇನು ಸೌಂಡ್ ಮಾಡದೇ ಇದ್ರು, ಶ್ರೀಲೀಲಾ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ರು. ಈಗ ನಂದಮೂರಿ ಬಾಲಕೃಷ ಅವರ ಜೊತೆ ನಟಿಸೋದಕ್ಕೆ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

Advertisements

ಸೂಪರ್ ಸ್ಟಾರ್ ನಂದಮೂರಿ ಬಾಲಯ್ಯ ಅವರಿಗೆ `ಸರಿಲೇರು ನೀಕೆವ್ವರು’ ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶನ ಮಾಡ್ತಿದ್ದಾರೆ. ಡಿಫರೆಂಟ್ ಕಥೆಯಲ್ಲಿ ವಯೋವೃದ್ಧನ ಪಾತ್ರಕ್ಕೆ ಬಾಲಯ್ಯ ಜೀವ ತುಂಬ್ತಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯಗೆ ತಂಗಿ ರೋಲ್‌ನಲ್ಲಿ ಶ್ರೀಲೀಲಾ ಮಿಂಚಲಿದ್ದಾರೆ. ಬಾಲಯ್ಯ ಈ ಚಿತ್ರದ ಹೈಲೆಟ್ ಆಗಿದ್ದು, ಪ್ರಮುಖ ಪಾತ್ರದಲ್ಲಿ ಭರಾಟೆ ಬ್ಯೂಟಿ ಶ್ರೀಲೀಲಾ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

Advertisements

ಇನ್ನು ಶ್ರೀಲೀಲಾ ಲಿಸ್ಟ್‌ನಲ್ಲಿ, ನವೀನ್ ಪೋಲಿಶೆಟ್ಟಿ ಜತೆ `ಜಾತಿರತ್ನಾಲು’, ರವಿತೇಜಾ ಜತೆ `ಧಮಾಕ’, ವೈಷ್ಣವ್ ತೇಜ್ ಜತೆ ಹೊಸ ಪ್ರಾಜೆಕ್ಟ್, ಮತ್ತು ಮಹೇಶ್ ಬಾಬು ಚಿತ್ರದಲ್ಲೂ ಕಿಸ್ ನಟಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ ಕನ್ನಡದ ನಟಿ ಪರಭಾಷಾ ಚಿತ್ರಗಳಲ್ಲೂ ಸುದ್ದಿ ಮಾಡ್ತಿರೋದು ನೋಡಿ ಫ್ಯಾನ್ಸ್ ಥ್ರಿಲ್ ಅಗಿದ್ದಾರೆ.

Advertisements
Exit mobile version