ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

Public TV
1 Min Read
sreeleela

ಶ್ರೀಲೀಲಾ (Sreeleela) ಅವರು ‘ಪುಷ್ಪ 2’ (Pushpa 2)  ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ (Allu Arjun) ನಟಿ ವಿಶೇಷವಾಗಿರುವ ಗಿಫ್ಟ್‌ವೊಂದನ್ನು ಕಳುಹಿಸಿದ್ದಾರೆ. ಅದಕ್ಕೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿ, ನಟಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ

sreeleela

‘ಪುಷ್ಪ 2’ ಸ್ಪೆಷಲ್ ಹಾಡಿಗೆ ಕನ್ನಡದ ಬ್ಯೂಟಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಈ ಬೆನ್ನಲ್ಲೇ, ಸ್ನೇಹಾ ಅಲ್ಲು ಅರ್ಜುನ್ ಮತ್ತು ಮಕ್ಕಳಿಗೆ ನಟಿ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿದರು. ನಟಿ ಕಳುಹಿಸಿದ ಲವ್ಲಿ ಗಿಫ್ಟ್‌ಗೆ ನಟ ರಿಯಾಕ್ಟ್ ಮಾಡಿ, ನೀವು ಕಳುಹಿಸಿದ ಉಡುಗೊರೆಯನ್ನು ನಾನು ನೋಡಿದೆ. ನೀವು ಬರೆದ ಪತ್ರದಲ್ಲಿನ ಮಾತುಗಳು ನನ್ನ ಹೃದಯ ಮುಟ್ಟಿದೆ. ನಿಮ್ಮ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗುತ್ತಿದೆ.

sreeleela 1

ಅಂದಹಾಗೆ, ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಡಿ.5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

Share This Article