ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

Public TV
1 Min Read
sreeleela 2

ನ್ನಡದ ‘ಕಿಸ್’ (Kiss)  ಬೆಡಗಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನ (Tollywood) ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿರಂಗದಲ್ಲಿ ಸತತ ಸೋಲಿನ ನಂತರ ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ನಟಿ ಆಸೆ ವ್ಯಕ್ತಪಡಿಸಿದ್ದಾರೆ.

SREELEELA 3ಶ್ರೀಲೀಲಾ ಅಂದಕ್ಕೆ, ಆಕೆಯ ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಸ್ ಬೆಡಗಿ ನಟಿಸಿದ ಸಿನಿಮಾಗಳು ಹಿಟ್‌ ಆಗಿರಲಿ ಅಥವಾ ಫ್ಲಾಪ್ ಆಗಿರಲಿ ಅವರ ಮೇಲಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇದೀಗ ತೆಲುಗಿನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಇತ್ತೀಚೆಗೆ ತಮಿಳುನಾಡಿನಲ್ಲಿ ಮೆಡಿಕಲ್‌ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟ ಶಿವಕಾರ್ತಿಕೇಯನ್‌ ಜೊತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ, ತಮಿಳು ಅಭಿಮಾನಿಗಳ ಕ್ರೇಜ್ ನೋಡಿ ನಟಿ ಶಾಕ್ ಆಗಿದ್ದಾರೆ.

SREELEELA 1 3

ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟು ದಿನ ನನಗೊಂದು ಅನುಮಾನವಿತ್ತು. ನನಗೆ ತಮಿಳು ಬರುವುದಿಲ್ಲ, ತಮಿಳಿನಲ್ಲಿ ಸಿನಿಮಾ ಮಾಡಿಲ್ಲ. ಇಲ್ಲಿನವರಿಗೆ ನನ್ನ ಪರಿಚಯ ಇರಲ್ಲ ಎಂದುಕೊಂಡಿದ್ದೆ. ನನ್ನನ್ನು ಅತಿಥಿ ಆಗಿ ಕರೆದಾಗ, ನನ್ನ ಹೇಗೆ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ನಿಮ್ಮ ಪ್ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮನ್ನು ನೋಡಿದ ಮೇಲೆ ಒಂದು ತಮಿಳು ಚಿತ್ರ (Tamil Films) ಮಾಡಬೇಕು ಅನ್ನಿಸುತ್ತಿದೆ ಎಂದು ನಟಿ ಮಾತನಾಡಿದ್ದಾರೆ.

sreeleela 1

ಮೆಡಿಕಲ್ ಕಾಲೇಜಿನಲ್ಲಿ ಇಷ್ಟು ಎನರ್ಜಿ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಕೂಡ ಮೆಡಿಕಲ್ ವಿದ್ಯಾರ್ಥಿ. ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸದ್ಯ ಶ್ರೀಲೀಲಾ ಮಾತುಗಳು ವೈರಲ್ ಆಗಿವೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

ಸದ್ಯ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಸಿನಿಮಾ ಶ್ರೀಲೀಲಾ (Sreeleela) ಕೆರಿಯರ್‌ಗೆ ಬ್ರೇಕ್ ಕೊಡುತ್ತಾ ಕಾದುನೋಡಬೇಕಿದೆ.

Share This Article