ಟಾಲಿವುಡ್, ಬಾಲಿವುಡ್‌ನಲ್ಲಿ ಕನ್ನಡದ ನಟಿಯರದ್ದೇ ಹವಾ ಜೋರಾಗಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ (Sreeleela) ಕೂಡ ಬಾಲಿವುಡ್‌ನಲ್ಲಿ ಶ್ರೀಲೀಲಾ ಕೂಡ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್
Advertisement
ಈಗಾಗಲೇ ಶ್ರೀಲೀಲಾ ಬಾಲಿವುಡ್‌ನಲ್ಲಿ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಪುತ್ರನಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಈ ಬೆನ್ನಲ್ಲೇ ಲವರ್ ಬಾಯ್ ಕಾರ್ತಿಕ್ ಆರ್ಯನ್ ಜೊತೆ ನಟಿಸಲು ಚಾನ್ಸ್ ಸಿಕ್ಕಿದೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಕಳೆದ ವರ್ಷ ಕಾರ್ತಿಕ್ ಆರ್ಯನ್ ನಿವಾಸದಲ್ಲಿ ನಡೆದ ಗಣೇಶ ಹಬ್ಬ ಆಚರಣೆಯಲ್ಲಿ ಶ್ರೀಲೀಲಾ ಭಾಗಿಯಾಗಿ ಪೂಜೆ ಸಲ್ಲಿಸಿದ್ದರು. ಈ ವಿಚಾರ ಕೂಡ ನಟನ ಜೊತೆಗಿನ ಸಿನಿಮಾ ಸುದ್ದಿಗೆ ಪುಷ್ಠಿ ನೀಡುವಂತೆ ಮಾಡಿದೆ.
Advertisement
ಒಂದು ವೇಳೆ, ಈ ವಿಚಾರ ನಿಜವೇ ಆದಲ್ಲಿ ಕಾರ್ತಿಕ್ ಮತ್ತು ಶ್ರೀಲೀಲಾ ಜೋಡಿ ಕಮಾಲ್ ಮಾಡೋದು ಗ್ಯಾರಂಟಿ. ಈಗಾಗಲೇ ಕಾರ್ತಿಕ್ ನಟಿಸಿರುವ ರೊಮ್ಯಾಂಟಿಕ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದೆ. ಹಾಗಾಗಿ ಕಾರ್ತಿಕ್ ಮತ್ತು ಶ್ರೀಲೀಲಾ ಜೋಡಿ ನೋಡಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.