ಕನ್ನಡದ ಬ್ಯೂಟಿ ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಸೌಂದರ್ಯದ ಜೊತೆ ಪ್ರತಿಭೆ ಇರುವ ಶ್ರೀಲೀಲಾ ಬ್ರೇಕ್ ನಂತರ ಮತ್ತಷ್ಟು ಬ್ಯುಸಿಯಾಗಿದ್ದಾರೆ. ತೆಲುಗಿನ ಜೊತೆ ಬಾಲಿವುಡ್‌ನಿಂದಲೂ ‘ಕಿಸ್’ (Kiss) ನಟಿಗೆ ಬುಲಾವ್ ಬರುತ್ತಿದೆ. ಇದನ್ನೂ ಓದಿ:ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ
ಶ್ರೀಲೀಲಾ ಬೆಂಗಳೂರಿನ ಕಾಲೇಜುವೊಂದರಲ್ಲಿ ಮೆಡಿಕಲ್ ಓದುತ್ತಿದ್ದಾರೆ. ಇದರ ಪರೀಕ್ಷೆಯ ನಿಮಿತ್ತ ‘ಗುಂಟೂರು ಖಾರಂ’ ಸಿನಿಮಾದ ನಂತರ ಬ್ರೇಕ್ ಪಡೆದುಕೊಂಡಿದ್ದರು. ಪರೀಕ್ಷೆ, ಓದು ಅಂತ ಬ್ಯುಸಿಯಿದ್ದ ನಟಿ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಗಟ್ಟಿಮೇಳ’ ನಟಿ
ಇದೀಗ ನಿತಿನ್ ಜೊತೆ ‘ರಾಬಿನ್‌ಹುಡ್’ (Robinhood Film) ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ (Pawan Kalyan) ಜೊತೆಗಿನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಒಪ್ಪಿಕೊಂಡಿದ್ದಾರೆ. ಕನ್ನಡದ ‘ಜ್ಯೂನಿಯರ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ತಿದೆ ಚಿತ್ರತಂಡ.
ಅದಷ್ಟೇ ಅಲ್ಲ, ತಮಿಳಿನ ಅಜಿತ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೂ ಶ್ರೀಲೀಲಾ ನಾಯಕಿ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಗೂ ಇವರೇ ಹೀರೋಯಿನ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ನಲ್ಲಿ ಶ್ರೀಲೀಲಾಗೆ ಚಿತ್ರರಂಗದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿರೋದು ಗ್ಯಾರಂಟಿ.