ಟಾಲಿವುಡ್‌ನ ಹೆಸರಾಂತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಉಮಾ ಶರಣಾಗಿದ್ದಾರೆ.
ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿರುವ ನಟ ಎನ್‌ಟಿಆರ್ ಅವರ ಕಿರಿಯ ಪುತ್ರಿ ಉಮಾ, ಕೆಲ ತಿಂಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದೀಗ ಮುಂಬೈನ ಜುಬ್ಲಿ ಹಿಲ್ಸ್ನ ತಮ್ಮ ನಿವಾಸದಲ್ಲಿ ಉಮಾ ಮಹೇಶ್ವರಿ ಸಾವಿಗೆ ಶರಣಾಗಿದ್ದಾರೆ. ಇದನ್ನೂ ಓದಿ:ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ
ಎನ್‌ಟಿಆರ್ ಕಿರಿಯ ಪುತ್ರಿ ಕೆಲ ತಿಂಗಳುಗಳಿಂದ ಅನಾರೋಗ್ಯದ ಬಳಲುತ್ತಿದ್ದರು. ಇದಕ್ಕಾಗಿ ಸೂಕ್ತ ಕಡೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಮಾ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಇದೀಗ ಉಮಾ ಅವರ ಸಾವಿಗೆ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ದಿವಂಗತ ಎನ್‌ಟಿಆರ್ ಅವರಿಗೆ 12 ಜನ ಮಕ್ಕಳು ಎಂಟು ಮಂದಿ ಗಂಡು ಮಕ್ಕಳು, 4 ಜನ ಹೆಣ್ಣು ಮಕ್ಕಳಿದ್ದರು. ಉಮಾ ಮಹೇಶ್ವರಿ ಅವರು ಇವರಲ್ಲಿ ಕೊನೆಯ ಮಗಳಾಗಿದ್ದರು.