ಭ್ರಷ್ಟವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಮಾಡಲು ಹೊರಟಿದ್ದಾರೆ: ಎಸ್.ಆರ್.ಹಿರೇಮಠ್

Public TV
2 Min Read
SR Hiremath

ಬಾಗಲಕೋಟೆ: ಕೆಪಿಸಿಸಿಗೆ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟವ್ಯಕ್ತಿಯನ್ನು ಆಯ್ಕೆ ಮಾಡಲು ಹೊರಟಿದ್ದಾರೆ ಎಂದರೆ ಅವರೆಂತ (ಕಾಂಗ್ರೆಸ್ ವರಿಷ್ಠರು) ದೀಢ ಪಂಡಿತರು ಇರಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆಶಿ ಅತ್ಯಂತ ಭ್ರಷ್ಟ ವ್ಯಕ್ತಿ. ಭ್ರಷ್ಟಾಚಾರದ ಸ್ವರೂಪ. ನಾಗರಿಕ ಸಮಾಜದಲ್ಲಿ ಇರದೆ ಜೈಲಿನಲ್ಲಿ ಇರಬೇಕಾದವರು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಏಕವನದಲ್ಲಿ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸಿಎಂ ಇದ್ದಾಗ ಏನೇನು ಮಾಡಿದ? ಅತಿಭ್ರಷ್ಟ ಶಾಮ್‍ಭಟ್‍ನನ್ನು ತಂದು ಕೆಪಿಎಸ್‍ಸಿಗೆ ಮುಖ್ಯಸ್ಥ ಮಾಡಿದ. ದರೋಡೆಕೋರ ಲಕ್ಷ್ಮಣನ ತಂದು ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರಾನ್ನಗಿ ಮಾಡಿದ್ದರು. ಲೋಕಾಯುಕ್ತ ಸಂಸ್ಥೆ ಶಕ್ತಿಯನ್ನು ಕಸಿದುಗೊಂಡು ಎಸಿಬಿ ಮಾಡಿದರು. ಬಿಎಸ್‍ವೈ ಅಕ್ರಮ ಗಣಿಗಾರಿಕೆ ಮಾಡಿದ್ದರು. ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ, ಭೂಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.

ಮತದಾರರು ಸಕ್ರೀಯರಾಗಬೇಕು. ಈ ಸಾರ್ವಜನಿಕ ಸೇವೆ ಮಾಡುವವರನ್ನು ಸರಿಮಾಡಬೇಕು. ದೇಶದಲ್ಲಿ ಸರ್ವಾಧಿಕಾರ ನಡೆಯುದಿಲ್ಲ. ಈ ಹಿಂದೆ ಇಂದಿರಾಗಾಂಧಿ ಕೂಡ ಮಾಡಬಾರದ ಕೆಲಸ ಮಾಡಿದ್ದರು. ಅವರ ಮಗ ಸಂಜಯಗಾಂಧಿ, ಇಂದಿರಾಗಾಂಧಿ ಅವರು ಕ್ಯಾಬಿನೇಟ್ ಸದಸ್ಯರು ಸೋತಿದ್ದಾರೆ. ಇವತ್ತಿನ ಸ್ಥಿತಿ ನೋಡಿದರೆ ಇವರಿಗೂ ಅದೇ ಪರಿಸ್ಥಿತಿ ಬರುತ್ತೆ ಎಂದು ಪರೋಕ್ಷವಾಗಿ ಕಿಡಿಕಾರಿದರು. ಕಪ್ಪು ಹಣ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿ, ಆ ಕಡೆ ಗಮನ ಹರಿಸಿಲ್ಲ. ದೇಶದ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿದೆ ಎಂದರು.

ಮುಂದಿನ ಫೆಬ್ರವರಿ, ಮಾರ್ಚ್ ನಲ್ಲಿ ಶರಣ, ಸಂತ ಸಂದೇಶ ಯಾತ್ರೆ ನಡೆಯಲಿದೆ. ಒಂದು ರಾಜ್ಯದಲ್ಲಿ ಮತ್ತೊಂದು ರಾಷ್ಟ್ರಮಟ್ಟದಲ್ಲಿ ಯಾತ್ರೆ ನಡೆಯಲಿದ್ದು, ಕರ್ನಾಟಕದ ಕಾಗಿನೆಲೆಯಿಂದ ಕೂಡಲಸಂಗಮದವರೆಗೆ ಸಂದೇಶ ಯಾತ್ರೆ ನಡೆಯಲಿದೆ. ಬಳಿಕ ಬಸವಕಲ್ಯಾಣದಿಂದ ಮಹಾರಾಷ್ಟದ ಪಂಡರಾಪುರ ಮೂಲಕ ತುಕಾರಾಮ್‍ರ ಜನ್ಮಸ್ಥಳದವರೆಗೂ ಯಾತ್ರೆ ಸಾಗಲಿದೆ. ನಮ್ಮ ಸಂಸ್ಕೃತಿ, ಸಂವಿಧಾನದ ಆಶಯಗಳನ್ನು ಪುನರ್ ಸ್ಥಾಪಿಸಲು ಈ ಯಾತ್ರೆ ಮುಖ್ಯವಾಗಿದೆ ಎಂದರು.

ಮಂಗಳೂರು ಗೋಲಿಬಾರ್ ಘಟನೆ ವಿಚಾರ, ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧವಾಗಿ ಕೆಲವೇ ಧರ್ಮಗಳನ್ನು ಉಲ್ಲೇಖಿಸಿದ್ದಾರೆ. ಗೋಲಿಬಾರ್ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇಲ್ಲವೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಈಗ ಪೊಲೀಸರ ಮೂಲಕ ತನಿಖೆ ಮಾಡಿಸಿದರೆ ಸತ್ಯ ಹೊರಬರಲ್ಲ. ಪೊಲೀಸ್ ಇಲಾಖೆ ಮುಖ್ಯಸ್ಥರಾಗಿ ತಾವೇ ಇರುವಾಗ ತನಿಖೆ ಹೇಗಾಗುತ್ತೆ? ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *