ಮುಂಬೈ: ಮೊಣಕಾಲು ಗಾಯಕ್ಕೆ ತುತ್ತಾಗಿದ್ದ ಟೀಂ ಇಂಡಿಯಾದ (Team India) ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮತ್ತೆ ಟೀಂ ಇಂಡಿಯಾಕ್ಕೆ ಮರಳುತ್ತಿದ್ದಾರೆ.
ಬಾಂಗ್ಲಾದೇಶದ (Bangladesh) ವಿರುದ್ಧ ಡಿಸೆಂಬರ್‌ನಲ್ಲಿ ನಡೆಯಲಿರುವ ಟೆಸ್ಟ್ (Test Cricket) ಹಾಗೂ ಏಕದಿನ ಸರಣಿ ಮೂಲಕ ತಂಡಕ್ಕೆ ಮರಳಲಿದ್ದಾರೆ. ಈ ಬಗ್ಗೆ ಬಿಸಿಸಿಐ (BCCI) ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ
Advertisement
Advertisement
ಹೌದು. ಏಷ್ಯಾಕಪ್‌ನ (AisaCup2022) ಮೊದಲೆರಡು ಪಂದ್ಯಗಳಲ್ಲಿ ಆಲ್‌ರೌಂಡರ್ ಆಟವಾಡಿದ್ದ ರವೀಂದ್ರ ಜಡೇಜಾ ನಂತರ ಮೊಣಕಾಲು ಗಾಯಕ್ಕೆ ತುತ್ತಾದರು. ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದರು. ಆ ಬಳಿಕ ಸೋಲಿನತ್ತ ಮುಖ ಮಾಡಿದ ಭಾರತ ಸೂಪರ್ ಫೋರ್ ಹಂತದಲ್ಲೇ ಮುಗ್ಗರಿಸಿ ನಿರಾಸೆ ಮೂಡಿಸಿತ್ತು. ಅಲ್ಲದೇ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್‌ನಲ್ಲೂ (T20 WorldCup) ಜಡೇಜಾ ಸ್ಥಾನ ಕಳೆದುಕೊಂಡರು.
Advertisement
Advertisement
ಇದೀಗ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಬಾಂಗ್ಲಾದೇಶದ (Bangladesh) ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯ ಮೂಲಕ ಮತ್ತೆ ಟೀಂ ಇಂಡಿಯಾಕ್ಕೆ (Team India) ಮರಳಲಿದ್ದಾರೆ. ಇದನ್ನೂ ಓದಿ: ಖಾಸಗಿತನಕ್ಕೆ ಧಕ್ಕೆ ತರಬೇಡಿ – ಹೋಟೆಲ್ ವಿರುದ್ಧ ಕೊಹ್ಲಿ ಕೆಂಡ
ಬಾಂಗ್ಲಾದೇಶ ವಿರುದ್ಧ ಸೆಣಸುವ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ) (Rohit Sharma), ಕೆಎಲ್ ರಾಹುಲ್ (KL Rahul) (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ (Virat Kohli), ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್.
Squad for Bangladesh ODIs:
Rohit Sharma (C), KL Rahul (vc), Shikhar Dhawan, Virat Kohli, Rajat Patidar, Shreyas Iyer, Rahul Tripathi, Rishabh Pant (wk), Ishan Kishan (wk), Ravindra Jadeja, Axar Patel, W Sundar, Shardul Thakur, Mohd. Shami, Mohd. Siraj, Deepak Chahar, Yash Dayal
— BCCI (@BCCI) October 31, 2022
ಟೆಸ್ಟ್ ಕ್ರಿಕೆಟ್ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್‌ದೀಪ್ ಯಾದವ್ , ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.