ಬೆಂಗಳೂರು: ನಟ ದರ್ಶನ್ (Actor Darshan) ಕೊಲೆ ಕೇಸ್‌ನಲ್ಲಿ ಎಸ್‌ಪಿಪಿ (SPP) ಬದಲಾವಣೆ ಪ್ರಸ್ತಾಪ ನನ್ನ ಮುಂದೆ ಬಂದಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೂ ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಕೊಲೆ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಪಿಪಿ ಬದಲಾವಣೆ ಆಗೋ ವಿಷಯ ನನಗೆ ಗೊತ್ತಿಲ್ಲ. ಆದರೆ ಮಾಧ್ಯಮಗಳಲ್ಲಿ ಸಿಎಂ ಮೇಲೆ ಒತ್ತಡ ಹಾಕಿದ್ದಾರೆ ಎಂದು ಬರುತ್ತಿದೆ. ನನ್ನ ಮೇಲೆ ಒತ್ತಡ ಹಾಕಿದ್ದಾರೆ ಎಂಬುದು ಸುಳ್ಳು. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಯಾವ ಮಂತ್ರಿಯೂ ಒತ್ತಡ ಹಾಕಿಲ್ಲ. ಯಾವ ಶಾಸಕರೂ ಒತ್ತಡ ಹಾಕಿಲ್ಲ. ಇವೆಲ್ಲಾ ಸತ್ಯಕ್ಕೆ ದೂರವಾದದ್ದು. ಎಸ್‌ಪಿಪಿ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಹೋಟೆಲ್‌ನಲ್ಲಿ ನಡೆದಿತ್ತಾ ಸ್ಕೆಚ್? – ಇಡೀ ಪ್ಲಾನ್ ಮಾಸ್ಟರ್ ಮೈಂಡ್ ಯಾರು?
Advertisement
Advertisement
ಸಿದ್ದರಾಮಯ್ಯ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಎಸ್‌ಪಿಪಿ ಬದಲಾವಣೆ ಮಾಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಅನ್ನೋದು ಸುಳ್ಳು. ವಿಪಕ್ಷಗಳು ಹೇಳೋದೆಲ್ಲಾ ಸತ್ಯನಾ? ಯಾವ ಮಿನಿಸ್ಟರ್‌ಗಳು ಕೂಡಾ ದರ್ಶನ್ ವಿಷಯಕ್ಕೆ ನನ್ನನ್ನು ಭೇಟಿಯಾಗಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೂ ನಾನು ಕೇಳಲ್ಲ. ಕಾನೂನು ಏನು ಇರುತ್ತದೆಯೋ ಅದೇ ನಾನು ಮಾಡೋದು ಹೇಳಿದರು. ಇದನ್ನೂ ಓದಿ: ಹತ್ಯೆಯಾದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾ ಸಂಸತ್ತು ಮೌನಾಚರಿಸಿ ಗೌರವ – ಭಾರತ ಕೆಂಡಾಮಂಡಲ!
Advertisement
Advertisement
ದರ್ಶನ್ ಕೇಸ್‌ನಲ್ಲಿ ಪೊಲೀಸರಿಗೆ ಎಲ್ಲಾ ಸ್ವಾತಂತ್ರ‍್ಯ ಕೊಟ್ಟಿದ್ದೇವೆ. ಅವರಿಗೆ ಕಾನೂನು ಪ್ರಕಾರ ಮಾಡಿ ಅಂತ ಹೇಳಿದ್ದೇವೆ. ಎಸ್‌ಪಿಪಿ ಬದಲಾವಣೆ ಮಾಡೋ ಪ್ರಸ್ತಾವನೆ ನನ್ನ ಮುಂದೆ ಇಲ್ಲ ಎಂದರು. ಇದನ್ನೂ ಓದಿ: ಐ ವಾಂಟ್ ಟು ಡೆವೆಲಪ್ ಚನ್ನಪಟ್ಟಣ: ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಡಿಕೆಶಿ ಪರೋಕ್ಷ ಸುಳಿವು