ಡಿವೋರ್ಸ್ ವದಂತಿಗೆ ಬ್ರೇಕ್- ಜೊತೆಯಾಗಿ ಹೋಳಿ ಆಚರಿಸಿದ ಐಶ್ವರ್ಯ, ಅಭಿಷೇಕ್ ಬಚ್ಚನ್

Public TV
1 Min Read
AISHWARYA RAI BACCHAN

ಬಾಲಿವುಡ್‌ನ ಸ್ಟಾರ್ ಕಪಲ್ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಜೋಡಿ ಅನೇಕರಿಗೆ ಮಾದರಿ. ಹೀಗಿರುವಾಗ ಇತ್ತೀಚೆಗೆ ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂಬ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಹೋಳಿ ಹಬ್ಬವನ್ನು ಇಬ್ಬರೂ ಜೊತೆಯಾಗಿ ಆಚರಿಸುವ ಮೂಲಕ ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ. ಇದನ್ನೂ ಓದಿ:ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

aishwarya rai

ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಸಂಬಂಧ ಸರಿಯಲ್ಲ. ಹೀಗಂತ ಕೋಟಿ ಜನ ಕುಟುಕಿದ್ದರು. ಆದರೆ ಆ ಸುದ್ದಿಗೆ ಎಳ್ಳು ನೀರು ಬಿಟ್ಟಿದೆ ಬಾಲಿವುಡ್ ಫಸ್ಟ್ ಫ್ಯಾಮಿಲಿ ಜೋಡಿ. ಕೆಲವು ತಿಂಗಳಿಂದ ಬೇರೆ ಬೇರೆ ಮನೆಯಲ್ಲಿ ವಾಸ ಇದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಹೀಗಾಗಿ ಡಿವೋರ್ಸ್ ಜೋರಾಗಿ ಕೇಳಿ ಬಂದಿತ್ತು. ಮತ್ತೆ ಈ ಜೋಡಿ ಒಂದಾಗಿದ್ದು ಹೇಗೆ? ಜಂಟಿಯಾಗಿ ಕಾಣಿಸಿದ್ದೆಲ್ಲಿ? ಇಲ್ಲಿದೆ ಅಸಲಿ ವಿಚಾರ. ಇದನ್ನೂ ಓದಿ:ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

AISHWARYA RAI 1

ಐಶ್ವರ್ಯ ರೈ ಬಚ್ಚನ್ ಕೆಲವು ತಿಂಗಳಿಂದ ಅಮ್ಮನ ಮನೆಯಲ್ಲಿದ್ದಾರೆ. ಜೊತೆಗೆ ಮಗಳು ಆರಾಧ್ಯರನ್ನೂ ಕರೆದುಕೊಂಡಿದ್ದಾರೆ. ಅಲ್ಲಿಂದ ತಮಟೆ ಸೌಂಡ್ ಹೆಚ್ಚಾಯಿತು. ಶಿವ ಶಿವಾ ಅಷ್ಟು ಚೆನ್ನಾಗಿದ್ದ ಜೋಡಿಗೆ ಯಾರ ಕಣ್ಣು ಬಿತ್ತೋ? ಎಂದು ಫ್ಯಾನ್ಸ್ ಹಿಡಿಶಾಪ ಹಾಕುತ್ತಿರುವಾಗಲೇ ಬಂದಿತಲ್ಲ ಹೋಳಿ ಹಬ್ಬ. ಅಭಿಷೇಕ್ ಮತ್ತು ಐಶ್ವರ್ಯ ಒಬ್ಬರಿಗೊಬ್ಬರು ಕೆಂಪು ಬಣ್ಣ ಬಳಿದುಕೊಂಡಿದ್ದಾರೆ.

ಹೋಳಿ ಹಬ್ಬದ ದಿನ ಅಭಿಷೇಕ್ ದಂಪತಿ ಜೊತೆಯಾಗಿ ಆಚರಿಸಿದ್ದಾರೆ. ಹೋಳಿ ಹಬ್ಬವನ್ನು ಕುಟುಂಬದ ಜೊತೆ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿ, ನಮ್ಮ ಸಂಸಾರ ಚೆನ್ನಾಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ.

Share This Article