ಕೊಡಗು: ಜಿಲ್ಲಾ ಜೆಡಿಎಸ್ ಘಟಕದಲ್ಲಿ ಆರಂಭವಾಗಿದ್ದ ಭಿನ್ನಮತ ಮೈತ್ರಿ ಪಕ್ಷಗಳ ಪ್ರಚಾರ ಸಭೆಯಲ್ಲೂ ಮುಂದುವರಿದಿದ್ದು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಒಳಜಗಳ ಮೈತ್ರಿಗೆ ಪೆಟ್ಟು ನೀಡಲಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸೋಮವಾರಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎರಡು ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ತಿಂಗಳ ಹಿಂದೆಯಷ್ಟೇ ಜೆಡಿಎಸ್ ಮುಖಂಡ ಕೆ.ಎಂ ಗಣೇಶ್ ಅವರನ್ನ ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದರೂ ಕೂಡ ಇಂದಿನ ಸಭೆಯಲ್ಲಿ ಮಾಜಿ ಸಚಿವ ಜೀ ವಿಜಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಂತೆ ಪಟ್ಟು ಬೆಂಬಲಿಗರು ಪಟ್ಟು ಹಿಡಿದಿದ್ದರು.
ಸಭೆಯಲ್ಲಿ ಉಂಟಾದ ಗದ್ದಲದ ವೇಳೆ ವೇದಿಕೆಯಲ್ಲಿದ್ದ ಜೀ ವಿಜಯ ಅವರು ಸುಮ್ಮನೆ ಕುಳಿತ್ತಿದದ್ದು ಕಂಡು ಬಂತು. ಆದರೆ ಜಗಳ ವಿಕೋಪಕ್ಕೆ ಹೋದಾಗ ಹಂತದಲ್ಲಿ ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ಸುಮ್ಮನಿರಿಸಿದರು. ಈಗಿನ ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಹೆಚ್ ವಿಶ್ವನಾಥ್ ಅವರು ನೇಮಿಸಿದ್ದರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಜೀ ವಿಜಯ ಅವರು, ಈಗಿನ ಅಧ್ಯಕ್ಷರ ಸಾಧನೆ ಶೂನ್ಯ. ನಮಗೆ ಪಕ್ಷದ ಕಾರ್ಯಕರ್ತರು ಮುಖ್ಯವಾಗಿದೆ ಎಂದರು. ಇತ್ತ ಅಭಿಮಾನಿಗಳು ಹೆಚ್ ವಿಶ್ವನಾಥ್ ಗೊಡ್ಡು ಹಸು ಎಂದು ಕೂಗಿದರು.
ಜೆಡಿಎಸ್ ಬಣದ ಕಿತ್ತಾಟ ನಡುವೆ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ, ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರು ಸುಸ್ತಾದರು. ಇತ್ತ ಜೆಡಿಎಸ್ ಪಕ್ಷದ ಒಳ ಜಗಳಗಳು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲುವಿಗೆ ಕಾರಣವಾಗಲಿದೆಯಾ ಎಂಬ ಅನುಮಾನವನ್ನು ಮೂಡಿಸಿದೆ.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯ್ ಶಂಕರ್, ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು 15 ಪೈಸೆಯನ್ನೂ ಹಾಕಲಿಲ್ಲ. ನಾವು ವರ್ಷಕ್ಕೆ 72 ಸಾವಿರ ಹಾಕುತ್ತೇವ ಎಂದು ಹೇಳಿದ್ದೇವೆ. ಅವರು ಹಣವನ್ನ ಹಾಕಲೇ ಇಲ್ಲ, ನಾವು ಹಾಕುತ್ತೇವೆ ಹಾಗಾಗಿ ಜನರು ಯಾರೂ ನುಡಿದಂತೆ ನಡೆಯುತ್ತಾರೋ ಅವರಿಗೆ ಮತ ನೀಡಿ ಮನವಿ ಮಾಡಿದರು.
ಮಾಜಿ ಸಚಿವ ಮಹಾದೇವಪ್ಪ ಮಾತನಾಡಿ, ಮೋದಿ ಮ್ಯಾಜಿಕ್, ಬರೀ ಮ್ಯಾಜಿಕ್ ಹೊರತು ನೈಜದಿಂದ ಕೂಡಿರುವುದಿಲ್ಲ, ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ಈ ಬಾರಿ ಮ್ಯಾಜಿಕ್ ನಡಿಯೋದು ಇಲ್ಲ ಎಂದರು. ಅಲ್ಲದೇ ಪ್ರತಾಪ್ ಸಿಂಹರವರು ಯಾವುದರಲ್ಲಿ ನಂಬರ್ ಓನ್ ಆಗಿದ್ದಾರೋ ಗೊತ್ತಿಲ್ಲ, ಆದರೆ ಅವರು ಪ್ರತಿಸ್ಪರ್ಧಿಸುವ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮಾತ್ರ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.