ಅನೇಕ ಜನರಿಗೆ ರೈಸ್ ಐಟಂಗಳು ಹೆಚ್ಚು ಪ್ರಿಯವಾಗಿರುತ್ತದೆ. ಬೆಳಗ್ಗಿನ ತಿಂಡಿಗೆ, ಮಕ್ಕಳ ಲಂಚ್ ಬಾಕ್ಸ್‌ಗೆ ರೈಸ್ ಐಟಂಗಳನ್ನು ಮಾಡುತ್ತಾರೆ. ಇದನ್ನು ಮಕ್ಕಳು ಕೂಡ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕಲರ್‌ಫುಲ್ ಆದ ಪಾಲಕ್ ರೈಸ್ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಪಾಲಕ್ ಸೊಪ್ಪು ಕಬ್ಬಿಣಾಂಶವನ್ನು ಒಳಗೊಂಡಿದೆ. ಇದನ್ನು ನಮ್ಮ ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಅಲ್ಲದೇ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಹಾಗಿದ್ರೆ ಪಾಲಕ್ ರೈಸ್ ಅನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕ್ರೀಮಿ ಚಾಕ್ಲೇಟ್ ಮೋಸ್ ಮನೆಯಲ್ಲಿ ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಬೌಲ್
ಬೇಯಿಸಿದ ಪಾಲಕ್ ಸೊಪ್ಪು – ಅರ್ಧ ಕಪ್
ಕರಿಬೇವು – ಸ್ವಲ್ಪ
ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ – ಅಗತ್ಯಕ್ಕೆ ತಕ್ಕಷ್ಟು
ಜೀರಿಗೆ – ಅರ್ಧ ಚಮಚ
ಅರಶಿಣ – ಅರ್ಧ ಚಮಚ
ಹಸಿರು ಮೆಣಸಿನಕಾಯಿ – 3
ಹೆಚ್ಚಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
* ಮೊದಲಿಗೆ ಬೇಯಿಸಿದ ಪಾಲಕ್ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
* ಈಗ ಒಂದು ಬಾಣಾಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಮೇಲೆ ಜೀರಿಗೆ, ಪಲಾವ್ ಎಲೆ, ಚೆಕ್ಕೆ, ಲವಂಗ ಹಾಗೂ ಏಲಕ್ಕಿಯನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಕರಿಬೇವು ಮತ್ತು ಉದ್ದ ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ತಿರುವಿಕೊಳ್ಳಿ.
* ಈಗ ಇದಕ್ಕೆ ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರ್ಧ ಚಮಚ ಅರಶಿಣ ಹಾಕಿ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಇದಕ್ಕೆ 2 ಚಮಚ ನೀರನ್ನು ಹಾಕಿಕೊಂಡು ಎಣ್ಣೆ ಬಿಡುವವರೆಗೆ ಕುದಿಸಿಕೊಳ್ಳಿ. ಬಳಿಕ ಇದಕ್ಕೆ ಅನ್ನ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನ್ನ ಪಾಲಕ್ ಪೇಸ್ಟ್ ಜೊತೆ ಹೊಂದಿಕೊಳ್ಳಬೇಕು.
* ಈಗ ಪಾಲಕ್ ರೈಸ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಸಲಾಡ್ ಜೊತೆ ತಿನ್ನಲು ಕೊಡಿ. ಇದನ್ನೂ ಓದಿ: ಗಾರ್ಲಿಕ್ ಬ್ರೆಡ್ ಮನೆಯಲ್ಲೇ ಟ್ರೈ ಮಾಡಿ
Web Stories