ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದ್ರೆ ಅನ್ನದೊಂದಿಗೆ ಚಿಕನ್ ಗ್ರೇವಿ ಇದ್ರೆ ಎಷ್ಟು ಚಂದ ಅಲ್ವಾ. ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ರುಚಿಯಾದ ಚಿಕನ್ ಗ್ರೇವಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್- 1 ಕೆ.ಜಿ
* ಗುಂಟೂರು ಮೆಣಸಿನಕಾಯಿ-20
* ಈರುಳ್ಳಿ- 2
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಸಾಸಿವೆ- ಅರ್ಧ ಚಮಚ
* ಅರಿಸಿಣ- ಅರ್ಧ ಚಮಚ
* ಬೆಳ್ಳುಳ್ಳಿ, ಶುಂಠಿ ಪೇಸ್ಟ್- 2 ಚಮಚ
* ಲವಂಗ, ಚಕ್ಕೆ- ಸ್ವಲ್ಪ
* ಕೊತ್ತಂಬರಿ- ಸ್ವಲ್ಪ
* ಕರಿಬೇವು-ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ಈರುಳ್ಳಿ, ಕರಿಬೇವು, ಸಾಸಿವೆ, ಅರಿಸಿಣ, ಉಪ್ಪು ಹಾಕಿ ಹಾಕಿ ಫ್ರೈ ಮಾಡಿ ಚಿಕನ್ ಹಾಕಿ ಬೇಯಲು ಬಿಡಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
Advertisement
* ಗುಂಟೂರು ಮೆಣಸಿನಕಾಯಿ, ಕೊತ್ತಂಬರಿಯನ್ನು ರುಬ್ಬಿಕೊಳ್ಳಬೇಕು.
* ನಂತರ ಮತ್ತೋಂದು ಬಾಣಲೆಗೆ ಅಡುಗೆ ಎಣ್ಣೆ, ಕರಿಬೇವು, ಸಾಸಿವೆ, ಕೊತ್ತಂಬರಿ, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿಕೊಡಿ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ
* ನಂತರ ಈಗಾಗಲೇ ಬೇಯಿಸಿದ ಚಿಕನ್ ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ, ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.