ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡೋ ವಿಧಾನ

Public TV
2 Min Read
reciep

ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಈಗ ತುಂಬಾ ಸಮಯವಿದೆ. ಇತ್ತ ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕಿನ್ ತೆಗೆದುಕೊಂಡು ಬನ್ನಿ. ಸುಲಭವಾಗಿ ಚಿಕನ್ ಡ್ರೈ ರೋಸ್ಟ್ ಮಾಡುವ ವಿಧಾನ ಇಲ್ಲಿದೆ…

pepper chicken recipe

ಬೇಕಾಗುವ ಸಾಮಗ್ರಿಗಳು
1. ಚಿಕನ್- 1/2 ಕೆಜಿ
2. ಈರುಳ್ಳಿ – 1
3. ಅರಿಶಿಣ – 1/2 ಟೀ ಸ್ಪೂನ್
4. ಖಾರದ ಪುಡಿ – 1/2 ಟೀ ಸ್ಪೂನ್
5. ಗರಂ ಮಸಾಲ – 1/2 ಟೀ ಸ್ಪೂನ್
6. ಪೆಪ್ಪರ್ – 1/4 ಟೀ ಸ್ಪೂನ್
7. ಜೀರಿಗೆ ಪೌಡರ್ – 1/4 ಟೀ ಸ್ಪೂನ್
8. ದನಿಯಾ ಪೌಡರ್ -1/2 ಟೀ ಸ್ಪೂನ್
9. ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀ ಸ್ಪೂನ್
10. ಹಸಿ ಮೆಣಸಿನಕಾಯಿ -3
11. ಕರಿಬೇವು – 5 ರಿಂದ 6 ಎಲೆ
12. ಎಣ್ಣೆ
13. ಉಪ್ಪು- ರುಚಿಗೆ ತಕ್ಕಷ್ಟು

spicy chettinad pepper chicken fryroast recipe.1024x1024 3

ಮಾಡುವ ವಿಧಾನ
* ಮೊದಲಿಗೆ ಚಿಕನ್ ತೊಳೆದುಕೊಂಡು ಒಂದು ಬೌಲ್‍ನಲ್ಲಿ ಹಾಕಿಕೊಳ್ಳಿ.
* ಇದಕ್ಕೆ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪೌಡರ್, ಜೀರಿಗೆ ಪೌಡರ್, ದನಿಯಾ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎರಡು ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಬಿಡಿ.
* ಈರುಳ್ಳಿಯನ್ನು ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಹಾಕಿಕೊಳ್ಳಿ (ನಿಮ್ಮ ಡಿಶ್ ರೆಡಿ ಆಗೋವರೆಗೂ ಸ್ಟೌವ್ ಸಣ್ಣ ಉರಿಯಲ್ಲಿರಬೇಕು). ಎಣ್ಣೆ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಪೇಸ್ಟ್ ಮತ್ತು ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ಈರುಳ್ಳಿ ಪೇಸ್ಟ್ ಫ್ರೈ ಆಗ್ತಿದ್ದಂತೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಚಿಟಿಕೆ ಅರಿಶಿಣ ಮತ್ತು ಅರ್ಧ ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡುತ್ತಿರಬೇಕು.

rece
* ಈರುಳ್ಳಿ ಪೇಸ್ಟ್ ಗೋಲ್ಡನ್ ಕಲರ್ ಬಂದ ಮೇಲೆ ಮಸಾಲ ಮಿಕ್ಸ್ ಮಾಡಿದ ಚಿಕನ್ ಸೇರಿಸಿಕೊಳ್ಳಿ.
* ಚಿಕನ್ ಮಿಕ್ಸ್ ಮಾಡಿದ ನಂತರ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಲು ಬಿಡಿ. ಮತ್ತೆ ಮುಚ್ಚಳ ತೆಗೆದ ಮೇಲೆ ಚೆನ್ನಾಗಿ ಕಲಕಬೇಕು. ಹೀಗೆ ಮಸಾಲ ಸೀದು ಹೋಗದಂತೆ ಚೆನ್ನಾಗಿ ಕಲಕುತ್ತಿರಬೇಕು. ( ಡ್ರೈ ರೋಸ್ಟ್ ಆಗಿದ್ದರಿಂದ ನೀರು ಸೇರಿಸಬಾರದು/ ಒಂದು ವೇಳೆ ತುಂಬಾನೇ ಡ್ರೈ ಅನಿಸಿದ್ರೆ ಬಿಸಿನೀರನ್ನ ಸ್ವಲ್ಪ ಸೇರಿಸಬಹುದು)
* ಹೀಗೆ ಚಿಕನ್ ಕಡಿಮೆ ಉರಿಯಲ್ಲಿ ಏಳರಿಂದ ಎಂಟು ನಿಮಿಷ ಬೇಯಿಸಿದ್ರೆ ನಿಮ್ಮ ಭಾನುವಾರದ ಸ್ಪೈಸಿ ಚಿಕನ್ ಡ್ರೈ ರೋಸ್ಟ್ ರೆಡಿ.

Share This Article
Leave a Comment

Leave a Reply

Your email address will not be published. Required fields are marked *