ಕೇರಳ ಎಂದರೆ ಮೀನಿನ ರೆಸಿಪಿಗೆ ಫೇಮಸ್. ಕೇರಳಗೆ ಹೋದ ನಾನ್‍ವೆಜ್ ಪ್ರಿಯರು ‘ಫಿಶ್ ಫ್ರೈ’ ತಿನ್ನದೆ ಬರವುದೇ ಇಲ್ಲ. ಕೇರಳ ಶೈಲಿಯಲ್ಲಿಯೇ ಮಿನು ತಿನ್ನಬೇಕು ಎಂದು ಜನರು ರೆಸ್ಟೋರೆಂಟ್‌ಗಳನ್ನು ಹುಡುಕುತ್ತಿರುತ್ತಾರೆ. ಆದರೆ ಬೇಕು ಎಂದಾಗ ಅದೇ ರೀತಿ ರುಚಿ ಸಿಗಾದೇ ಹಲವು ಜನರು ‘ಫಿಶ್ ಫ್ರೈʼ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾವು ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ‘ಫಿಶ್ ಫ್ರೈ’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ಇದು ಮಸಾಲೆಯುಕ್ತವಾಗಿರುವುದರಿಂದ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ.
Advertisement
ಬೇಕಾಗಿರುವ ಸಾಮಾಗ್ರಿಗಳು:
* ಅವೊಲಿ ಮೀನು – 1
* ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
* ಮೆಣಸಿನ ಪುಡಿ – 1 ಟೀಸ್ಪೂನ್
Advertisement
* ಅರಿಶಿನ ಪುಡಿ – ಅರ್ಧ ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ನಿಂಬೆ ರಸ – 2 ಟೀಸ್ಪೂನ್
* ಕರಿಬೇವು – 10 ರಿಂದ 15 ಎಲೆಗಳು
* ಎಣ್ಣೆ – ಅರ್ಧ ಕಪ್
* ನಿಂಬೆ ಹೋಳು – 2
* ಕಟ್ ಮಾಡಿದ ಈರುಳ್ಳಿ – 1 ಕಪ್
Advertisement
Advertisement
ಮಾಡುವ ವಿಧಾನ:
* ಮೀನುಗಳನ್ನು ಸ್ವಚ್ಛಗೊಳಿಸಿ, ಅದರ ಎರಡೂ ಬದಿಗಳನ್ನು ಕಟ್ ಮಾಡಿ.
* ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡುವ ಮೂಲಕ ಮಸಾಲಾವನ್ನು ತಯಾರಿಸಿ.
* ಎರಡೂ ಬದಿಗಳಲ್ಲಿ ಮೀನಿನ ಮಸಾಲಾವನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಮಸಾಲಾ ಜೊತೆಗೆ ಬಿಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮಸಾಲಾ ಮೀನನ್ನು ಮಧ್ಯಮ ಉರಿಯಲ್ಲಿ ಫ್ರೈ(ಕಡಿಮೆ ಎಣ್ಣೆಯನ್ನು ಬಳಸಿ) ಮಾಡಿ.
* ಅದು ಚೆನ್ನಾಗಿ ಸುಟ್ಟು, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತದನಂತರ ಇನ್ನೊಂದು ಬದಿ ಬೇಯಿಸಲು ತಿರುಗಿಸಿ.
* ಕೊನೆಗೆ ಕರಿದ ಮೀನಿನ ಫ್ರೈ ಮೇಲೆ ಪೇಪರ್ ಪೌಡರ್, ನಿಂಬೆ ರಸ ಮತ್ತು ಈರುಳ್ಳಿ ಹಾಕಿ ಬಡಿಸಿ.