ಇಸ್ಲಾಮಾಬಾದ್: ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ತಾಂತ್ರಿಕ ದೋಷದಿಂದಾಗಿ ಇಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.
ಸ್ಪೈಸ್‌ಜೆಟ್ ವಿಮಾನವು ದೆಹಲಿಯಿಂದ ದುಬೈಗೆ ತೆರಳಬೇಕಿತ್ತು. ಆದರೆ ಇಂಡಿಕೇಟರ್ ಲೈಟ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದೇ ಸುರಕ್ಷಿತವಾಗಿ ಕೆಳಗಿಳಿದ್ದಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇದ್ದರೆ, ಪಿಎಸ್‌ಐ ಕೇಸ್ ಅನ್ನೇ ಮುಚ್ಚಿ ಹಾಕ್ತಿದ್ರು: ಸಿಎಂ ಬೊಮ್ಮಾಯಿ
Advertisement
Advertisement
ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸದೇ ವಿಮಾನವನ್ನು ಸಾಮಾನ್ಯ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಯಾವುದೇ ಅಸಮರ್ಪಕ ಕಾರ್ಯದ ಬಗ್ಗೆ ಈ ಹಿಂದೆ ವರದಿಯಾಗಿಲ್ಲ. ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಳಾಸಾಹೇಬ್ ಮೇಲಿನ ಗೌರವಕ್ಕೆ ಆದಿತ್ಯ ಠಾಕ್ರೆ ವಿರುದ್ಧ ಕೈಮಕೈಗೊಂಡಿಲ್ಲ: ಶಿಂಧೆ ಬಣ