Bengaluru CityDistrictsKarnatakaLatestLeading NewsMain Post

ಕಾಂಗ್ರೆಸ್ ಸರ್ಕಾರ ಇದ್ದರೆ, ಪಿಎಸ್‌ಐ ಕೇಸ್ ಅನ್ನೇ ಮುಚ್ಚಿ ಹಾಕ್ತಿದ್ರು: ಸಿಎಂ ಬೊಮ್ಮಾಯಿ

Advertisements

ಬೆಂಗಳೂರು: ಪಿಎಸ್‌ಐ ಪ್ರಕರಣ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದಿರುತ್ತಿದ್ದರೆ, ಅವರು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದ್ದರು. ಏಕೆಂದರೆ ಈ ಹಿಂದೆಯೂ ಅವರು ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಬಂದಿದ್ದೇವೆ. ನಮ್ಮ ಈ ಕೆಲಸ ಹೀಗೆಯೇ ಮುಂದುವರಿಯುತ್ತದೆ. ಗೃಹ ಸಚಿವ ಆರಗ ಜ್ಞಾನೇಂದ್ರ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದಲೇ ಹಲವರ ಬಂಧನ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರಗ ಜ್ಞಾನೇಂದ್ರ ಅವರ ಪರ ಬ್ಯಾಟಿಂಗ್ ಮಾಡಿದರು.

ಗೃಹ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕೆಂಬ ಡಿ.ಕೆ ಶಿವಕುಮಾರ್ ಆಗ್ರಹಕ್ಕೆ ಟಾಂಗ್ ನೀಡಿದ ಬೊಮ್ಮಾಯಿ, ಅವರ ಕಾಲದಲ್ಲೂ ಪಿಎಸ್‌ಐ ಹಗರಣ ಆಗಿತ್ತು. ಪಿಎಸ್‌ಐ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಹಿರಿಯ ಅಧಿಕಾರಿಯೇ ಆರೋಪಿಯಾಗಿದ್ದರು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: 68 ಸಾವಿರ ಒತ್ತುವರಿ ತೆರವು, 844 ಕೋಟಿ ಮೌಲ್ಯ ಆಸ್ತಿ ಜಪ್ತಿ, 1.2 ಲಕ್ಷ ಲೌಡ್‌ ಸ್ಪೀಕರ್‌ ತೆರವು – 100 ದಿನದ ಸಾಧನೆ ಎಂದ ಯೋಗಿ

ನಾವು ನಮ್ಮ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅಧಿಕಾರಿಗಳು ಫ್ರೀ ಹ್ಯಾಂಡ್ ಆಗಿದ್ದಾರೆ. ನಮ್ಮದು ಝೀರೋ ಟಾಲರೆನ್ಸ್. ಇದೇ ಪ್ರಕರಣ ಕಾಂಗ್ರೆಸ್ ಇದ್ದಾಗ ನಡೆದಿದ್ರೆ, ಅವರು ಸಿಸ್ಟಮ್ಯಾಟಿಕ್ ಆಗಿ ಪ್ರಕರಣ ಮುಚ್ಚಿ ಹಾಕುತ್ತಿದ್ದರು ಎಂದರು.

ಗೃಹ ಸಚಿವರ ರಾಜೀನಾಮೆ ಕೇಳೋಕೆ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್‌ಎಸ್‌ಎಲ್ ವರದಿ ತರಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದ್ದೆ. ನಮ್ಮ ಗೃಹ ಸಚಿವರು ದಕ್ಷತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬಂಧನವಾಗಿರುವ 50 ಆರೋಪಿಗಳಲ್ಲಿ 20 ಜನ ಪೋಲಿಸ್ ಅಧಿಕಾರಿಗಳೇ ಇದ್ದಾರೆ. ಜ್ಞಾನೇಂದ್ರ ಅವರ ರಾಜೀನಾಮೆ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಿನ್ನ ಹೆಂಡತಿಯನ್ನು ಕಂಟ್ರೋಲ್ ಮಾಡೋಕೆ ಆಗೋಲ್ಲ ಅಂದ್ರೆ ಓಡಿ ಹೋಗ್ತಾಳೆ – ಠಾಕ್ರೆಗೆ ಈಶ್ವರಪ್ಪ ಟಾಂಗ್

Live Tv

Leave a Reply

Your email address will not be published.

Back to top button