ನವದೆಹಲಿ: ಸ್ಪೈಸ್ ಜೆಟ್ ವಿಮಾನಕ್ಕೆ (Spice Jet flight) ಗುರುವಾರ ಬಾಂಬ್ ಕರೆ (Bomb Threat) ನೀಡಿದ್ದ ಬ್ರಿಟಿಷ್ ಏರ್ವೇಸ್ನ (British Airways) ಟ್ರೈನಿ ಟಿಕೆಟ್ ಏಜೆಂಟ್ನನ್ನು ಶುಕ್ರವಾರ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಸಂಜೆ ದೆಹಲಿಯಿಂದ (Delhi) ಪುಣೆಗೆ (Pune) ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತೀವ್ರವಾಗಿ ಶೋಧ ನಡೆಸಿದ್ದರು. ಆದರೆ ವಿಮಾನದಲ್ಲಿ ಅಂತಹ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಇನ್ನೆಲೆ ಇದನ್ನು ಹುಸಿ ಬಾಂಬ್ ಕರೆ ಎಂದು ಘೋಷಿಸಲಾಯಿತು.
Advertisement
Advertisement
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿರು. ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಬ್ರಿಟಿಷ್ ಏರ್ವೇಸ್ ಟಿಕೆಟ್ ಕೌಂಟರ್ನಲ್ಲಿ ತರಬೇತಿ ಪಡೆಯುತ್ತಿದ್ದ ಅಭಿನವ್ ಪ್ರಕಾಶ್ (24) ಎಂದು ಗುರುತಿಸಿದ್ದಾರೆ.
Advertisement
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆರೋಪಿ ಬಾಂಬ್ ಬೆದರಿಕೆ ಕರೆ ನೀಡಲು ಕಾರಣವೇನು ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಬಾಲ್ಯದ ಗೆಳೆಯರಾದ ರಾಕೇಶ್ ಹಾಗೂ ಕುನಾಲ್ ಸೆಹ್ರಾವತ್ಗೆ ತಮ್ಮ ಗೆಳತಿಯರೊಂದಿಗೆ ಇನ್ನಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಸಲುವಾಗಿ ಬೆದರಿಕೆ ಕರೆ ಮಾಡಿದ್ದೆ. ಆ ಇಬ್ಬರು ಗೆಳತಿಯರು ಗುರುವಾರ ಬೆದರಿಕೆ ಹಾಕಲಾದ ಸ್ಪೈಸ್ ಜೆಟ್ ವಿಮಾನದಲ್ಲಿಯೇ ಪುಣೆಗೆ ತೆರಳಬೇಕಿತ್ತು ಎಂದು ಬಹಿರಂಗಪಡಿಸಿದ್ದಾನೆ. ಇದನ್ನೂ ಓದಿ: ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ
Advertisement
ನನ್ನ ಗೆಳೆಯರು ತಮ್ಮ ಗೆಳತಿಯರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದಾಗಿ ಹೇಳಿದ್ದು, ವಿಮಾನವನ್ನು ವಿಳಂಬಗೊಳಿಸಲು ಉಪಾಯ ಹುಡುಕುವಂತೆ ನನ್ನನ್ನು ಒತ್ತಾಯಿಸಿದ್ದರು. ಬಳಿಕ ನಾವು ಸ್ಪೈಸ್ ಜೆಟ್ ಏರ್ಲೈನ್ಸ್ನ ಕಾಲ್ ಸೆಂಟರ್ಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಲು ಸಂಚು ರೂಪಿಸಿದೆವು ಎಂದು ಆರೋಪಿ ತಿಳಿಸಿದ್ದಾನೆ.
ಗುರುವಾರ ಸಂಜೆ 6:30ಕ್ಕೆ ದೆಹಲಿ-ಪುಣೆ ಸ್ಪೈಸ್ ಜೆಟ್ ವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ ವಿಮಾನ ಟೇಕ್ ಆಫ್ ಆಗುವುದಕ್ಕೂ ಕೆಲವೇ ನಿಮಿಷಗಳ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿತ್ತು. ತಕ್ಷಣವೇ ಪ್ರಯಾಣಿಕರ ಬೋರ್ಡಿಂಗ್ ಅನ್ನು ನಿಲ್ಲಿಸಿ, ವಿಮಾನದಲ್ಲಿ ತೀವ್ರವಾದ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: 15 ಸಿಮ್ ಕಾರ್ಡ್ ಬದಲಾಯಿಸಿ, ವಿಗ್ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k