ಗಾಂಧಿನಗರ: ವೇಗವಾಗಿ ಬಂದ ಕಾರ್‍ವೊಂದು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾದ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗುಜರಾತ್‍ನ ಮೊರ್ಬಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸುದ್ಧಿ ಸಂಸ್ಥೆ ಇದರ ವಿಡಿಯೋವನ್ನ ಹಂಚಿಕೊಂಡಿದೆ. ಕಾರ್ ತಲೆಕೆಳಗಾಗಿ ಬಿದ್ದರೂ ಒಳಗಿದ್ದ ಚಾಲಕ ಹಾಗೂ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆಯಲ್ಲಿ ಅತೀ ವೇಗವಾಗಿ ಬಂದ ಕಾರ್ ಅಡ್ಡಾದಿಡ್ಡಿ ಚಲಿಸಿ ನಂತರ ರಸ್ತೆಯ ಕಲ್ಲುಹಾಸಿಗೆ ಗುದ್ದಿದ್ದು, ಸೀಮೆಂಟ್ ಕಿತ್ತು ಬಂದಿದೆ. ಬಳಿಕ ಕಾರ್ ಪೆಟ್ರೋಲ್ ಬಂಕ್‍ವೊಂದರ ಬಳಿ ಪಲ್ಟಿಯಾಗಿ ಬಿದ್ದಿದೆ. ಆದ್ರೆ ಆಶ್ಚರ್ಯವೆಂಬಂತೆ ಕೆಲವು ಸೆಕೆಂಡ್‍ಗಳ ನಂತರ ಇಬ್ಬರು ವ್ಯಕ್ತಿಗಳು ಕಾರಿನಿಂದ ನಿಧಾನವಾಗಿ ಹೊರಬರೋದನ್ನ ವಿಡಿಯೋದಲ್ಲಿ ಕಾಣಬಹುದು. ಬಳಿಮ ಸ್ಥಳೀಯರು ಅಲ್ಲಿಗೆ ದೌಡಾಯಿಸಿದ್ದಾರೆ.
ಕಾರಿನಲ್ಲಿದ್ದವರು ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
#WATCH Dramatic visuals of a car accident in Gujarat's Morbi, both the passengers escaped unhurt (Source: CCTV footage) (4.03.18) pic.twitter.com/najVePcPPF
— ANI (@ANI) March 5, 2018