ಬೆಂಗಳೂರು: ಇದೇ ಜನವರಿ 20, 21ರಂದು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯುವುದು ಬಹುತೇಕ ಅಂತಿಮವಾಗಿದೆ. ವಿಕಸಿತ ಭಾರತ ಜಿ ರಾಮ್ ಜಿ (G RAM G) ಕಾಯ್ದೆಗೆ ಕಾಂಗ್ರೆಸ್ (Congress) ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದಿಂದ ವಿಧಾನಮಂಡಲಗಳಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ವಿರೋಧ ನಿರ್ಣಯವನ್ನು ಕಳುಹಿಸಲು ಪ್ಲ್ಯಾನ್ ಮಾಡಿದೆ.
ಇದೇ ಕಾರಣಕ್ಕಾಗಿ ಜ.20 ಮಂಗಳವಾರ ಹಾಗೂ ಜ.21ರಂದು ಬುಧವಾರ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರದ ಸಿದ್ಧತೆ ನಡೆಸಿದ್ದು, ನಾಳೆ ನಡೆಯಲಿರುವ ತುರ್ತು ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ನರೇಗಾ ಬಗ್ಗೆ ಚರ್ಚೆಗೆ ಸಿದ್ಧ, ಸರ್ಕಾರ ವಿಶೇಷ ಅಧಿವೇಶನ ನಡೆಸಲಿ – ಸಿ.ಟಿ.ರವಿ
ಎರಡು ದಿನಗಳ ವಿಶೇಷ ಅಧಿವೇಶನ ರಣರಂಗಕ್ಕೆ ವೇದಿಕೆ ಆಗಲಿದ್ದು, ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಪರವಾಗಿ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಪಕ್ಷಗಳು ನಿಂತಿದ್ದು, ಕಾಂಗ್ರೆಸ್ ವಿರುದ್ಧಕ್ಕೆ ಪ್ರತ್ಯಾಸ್ತ್ರ ಪ್ರಯೋಗಿಸಲು ಸಿದ್ಧವಾಗಿವೆ. ಹಾಗಾಗಿ ವಿಶೇಷ ಅಧಿವೇಶನ ಸಾಕಷ್ಟು ಕುತೂಹಲ ಮೂಡಿಸಿದೆ.

