ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ‘ಮಾಸ್ ಲೀಡರ್’ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡು ಮುನ್ನುಗುತ್ತಿದೆ.
ಒಬ್ಬ ಯೋಧನಾಗಿ ಪಾತ್ರ ಮಾಡಿದಕ್ಕೆ ತುಂಬಾ ಖುಷಿಯಾಗಿದ್ದೇನೆ. ನನಗೆ ಚಿಕ್ಕಂದಿನಿಂದಲೂ ದೇಶ, ಯೋಧ ಅಂದರೆ ನನಗೆ ತುಂಬಾ ಇಷ್ಟ. ಸಿನಿಮಾದ ಎರಡನೇ ಭಾಗ ತುಂಬ ಇಷ್ಟವಾಗುತ್ತದೆ. ಭಾವನಾತ್ಮಕವಾಗಿ ಸಿನಿಮಾ ನೋಡುಗರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕೆಲವರು ದೇಶಭಕ್ತಿಯ ಬಗ್ಗೆ ಮಾತನಾಡಿ ನಮ್ಮ ಮಾತೃ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಚೆಕಪ್ ನಡೆಯುತ್ತೆ, ಪೊಲೀಸ್ ಭದ್ರತೆಯೂ ಇರುತ್ತದೆ. ಆದರೂ ಮರುದಿನ ಬಾಂಬ್ ಬ್ಲಾಸ್ಟ್ ಆಗುತ್ತದೆ ಇದು ನಮ್ಮೊಳಗಿನ ವ್ಯವಸ್ಥೆಯ ತಂತ್ರಜ್ಞಾನದ ಕೊರತೆಯನ್ನು ತೋರಿಸುತ್ತದೆ ಎಂದು ಶಿವಣ್ಣ ಹೇಳಿದರು.
Advertisement
ನಾವು ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಗಲಾಟೆಗಳು ನಡೆದವು. ನೀವು ಇಂಡಿಯಾದ ಪರವಾಗಿ ಸಿನಿಮಾ ಮಾಡುತ್ತಿದ್ದೀರಿ ಎಂಬ ಕಾರಣವೊಡ್ಡಿ ಗಲಾಟೆ ಮಾಡಿದರು. ಇದೇ ವೇಳೆ ಮತ್ತೆ ಕೆಲವರು ಬಂದು ನಮ್ಮ ಪರವಾಗಿ ಮಾತನಾಡಿ ನಮ್ಮನ್ನು ರಕ್ಷಿಸಿದರು ಎಂದು ಚಿತ್ರೀಕರಣದ ದಿನಗಳನ್ನು ಶಿವಣ್ಣ ನೆನಪಿಸಿಕೊಂಡರು.
Advertisement
Advertisement
ಥಿಯೇಟರ್‍ನಲ್ಲಿ ನಾನು ನನ್ನ ಸಿನಿಮಾ ನೋಡುವಾಗ ಬೇರೊಬ್ಬರ ಕಮೆಂಟ್‍ಗಳನ್ನು ಕೇಳುತ್ತಿರುತ್ತೇನೆ. ಅಲ್ಲಿ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಭಿಮಾನಿಗಳು ಮಾತ್ರ ಸಿನಿಮಾ ಬಗ್ಗೆ ಒಳ್ಳೆಯ ಮೆಚ್ಚುಗೆಯನ್ನು ನೀಡಿದ್ದಾರೆ. ಸಿನಿಮಾಗೆ ನಾಲ್ಕು ದಿನಗಳಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಅಂದ್ರು.
Advertisement
ಕಥೆ ಹೀಗಿರಬೇಕು: ಈ ತರಹದ ಸಿನಿಮಾಗಳನ್ನು ಈಗಾಗಲೇ ಮಾಡಿದ್ದೇವೆ. ಸಿನಿಮಾ ಕಥೆಯನ್ನು ಜನರಿಗೆ ವಿಭಿನ್ನವಾಗಿ ಹೇಳಬೇಕು, ಬಾಂಗ್ಲಾ ಜನರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡುವುದನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಎಂಬುದು ನನ್ನ ಆಶಯವಾಗಿತ್ತು. ಎಲ್ಲಾ ಸೀಕ್ವೆನ್ಸ್ ಗಳನ್ನು ಮಾಡುವಾಗ ಒಂದು ಟೇಸ್ಟ್ ಇರಬೇಕು. ಯೋಗಿ ನೆಗಟಿವ್ ರೋಲ್‍ಗೆ ಹೇಳಿ ಮಾಡಿಸಿದ ವ್ಯಕ್ತಿ. ತರುಣ್ ಒಬ್ಬ ಒಳ್ಳೆಯ ವ್ಯಕ್ತಿ, ಯಾವಾಗಲೂ ನಮ್ಮ ಕುಟುಂಬವನ್ನ ಪ್ರೀತಿಸುವ ವ್ಯಕ್ತಿ. ಸಿನಿಮಾದ ಬಗ್ಗೆ ಬೇರೆಯಾದ ಅಭಿರುಚಿಯನ್ನು ಹೊಂದಿದ್ದಾರೆ. ಮುಂದಿನ ವರ್ಷವೂ ತರುಣ್ ಜೊತೆ ಸಿನಿಮಾ ಮಾಡುವ ಯೋಜನೆ ಇದೆ ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಮಾಸ್ ಲೀಡರ್ ಸಿನಿಮಾ ವೀಕ್ಷಣೆ ಮಾಡಿದ ಶಿವಣ್ಣ- ಉಪ್ಪಿ ರಾಜಕೀಯ ಎಂಟ್ರಿಗೆ ಹೀಗಂದ್ರು
ಒಬ್ಬ ಕಟುಕನನ್ನು ಒಳ್ಳೆಯವನನ್ನಾಗಿ ಮಾಡಬಹುದು ಎಂಬವುದನ್ನು ಸಿನಿಮಾ ತೋರಿಸುತ್ತದೆ. ಒಂದು ನೆಗೆಟಿವ್ ಪಾತ್ರವನ್ನು ನಿರ್ದೇಶಕರು ಪಾಸಿಟಿವ್ ಆಗಿ ಬದಲಾಯಿಸಿದ್ದಾರೆ. ಸಿನಿಮಾ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ ಎಂದು ನಟ ಲೂಸ್ ಮಾದ ಯೋಗಿ ತಮ್ಮ ಪಾತ್ರದ ಬಗ್ಗೆ ಪರಿಚಯ ಮಾಡಿಕೊಟ್ಟರು.
ಸಿನಿಮಾ ಮಾಡುವಾಗ ತುಂಬಾ ಖುಷಿಯಾಗುತ್ತಿದೆ. ಆದರೂ ಮನದಲ್ಲಿ ಒಂದು ಭಯವಿತ್ತು, ಜನ ಹೇಗೆ ಸಿನಿಮಾ ಸ್ವೀಕರಿಸ್ತಾರೆ ಎಂಬುದು ಕಾಡುತ್ತಿತ್ತು. ಶಿವಣ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂದು ಜನರು ಸಿನಿಮಾವನ್ನು ಮೆಚ್ಚುಕೊಂಡಿದ್ದಾರೆ ಎಂದು ನಿರ್ಮಾಪಕ ತರೂಣ್ ಶಿವಪ್ಪ ಹೇಳಿದರು.
ಇದನ್ನೂ ಓದಿ: ಇಂದು ಮಾಸ್ ಲೀಡರ್ ರಿಲೀಸ್ – ಸಿನಿಮಾ ನೋಡಿ ಭೇಷ್ ಎಂದ ಕಿಚ್ಚ ಸುದೀಪ್
ಇಡೀ ಭಾರತೀಯರಿಗೆ ಸ್ವತಂತ್ರ ದಿನಕ್ಕೆ ಇದೊಂದು ಸಿನಿಮಾ ಗಿಫ್ಟ್ ಮುಖಾಂತರವಾಗಿ ನೀಡಿದ್ದೇವೆ. ಈ ತರಹದ ಸಿನಿಮಾಗಳನ್ನು ಜನ ತಾವು ನೋಡಿ, ಚಿತ್ರದ ಕಥೆಯಿಂದ ಸಿಗುವ ಸಂದೇಶವನ್ನು ಪಡೆಯಬೇಕು ಎಂದು ಥಿಯೇಟರ್ ಗೆ ಬರುತ್ತಿದ್ದಾರೆ. ಸಿನಿಮಾ ನೋಡಲು ಬರುತ್ತಿರುವವರಿಗೆ ಮತ್ತು ನೋಡಿವರಿಗೂ ಧನ್ಯವಾದಗಳು ಎಂದು ನಿರ್ದೇಶಕ ನರಸಿಂಹ ತಿಳಿಸಿದರು.
https://www.youtube.com/watch?v=v5vFAw_tTok