ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ `ಮಾಸ್ ಲೀಡರ್’ ಚಿತ್ರ ಇಂದು ತೆರೆಕಾಣಲಿದೆ. ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅಭಿನಯದ `ಮಾಸ್ ಲೀಡರ್’ ಅನೇಕ ಕಾರಣಗಳಿಂದ ಬಿಡುಗಡೆಗೂ ಮುನ್ನ ಭಾರೀ ಸೌಂಡ್ ಮಾಡಿತ್ತು.
ಸ್ಯಾಂಡಲ್ ವುಡ್‍ಗೇ ಲೀಡರ್ ಆಗಿರುವ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ ಇಂದು ರಾಜ್ಯಾದ್ಯಂತ 300 ಚಿತ್ರಮಂದಿಗಳಲ್ಲಿ `ಮಾಸ್ ಲೀಡರ್’ ಭರ್ಜರಿಯಾಗಿ ತೆರೆಕಾಣಲಿದೆ.
Advertisement
ಬಹುತಾರಾಗಣದ `ಮಾಸ್ ಲೀಡರ್’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಫಸ್ಟ್ ಟೈಂ ಮಿಲಿಟರಿ ಕ್ಯಾಪ್ಟನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವರಾಜ್‍ಕುಮಾರ್ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ರೆ ಇನ್ನುಳಿದ ವಿಶೇಷ ಪಾತ್ರಗಳಲ್ಲಿ ಲೂಸ್ ಮಾದ ಯೋಗೀಶ್, ಗುರುಜಗ್ಗೇಶ್, ವಿಜಯ್ ರಾಘವೇಂದ್ರ, ಶರ್ಮಿಳಾ ಮಾಂಡ್ರೆ ಮುಂತಾದವರು ಅಭಿನಯಿಸಿದ್ದಾರೆ.
Advertisement
ಬಿಗ್ ಬಜೆಟ್‍ನಲ್ಲಿ ತಯಾರಾದ `ಮಾಸ್ ಲೀಡರ್’ ಚಿತ್ರವನ್ನ ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಚಿತ್ರವನ್ನ ನರಸಿಂಹ ನಿರ್ದೇಶಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗ್ಲೇ ಹಿಟ್ ಆಗಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನು ಈಗಾಗ್ಲೇ ಈ ಚಿತ್ರವನ್ನ ನಟ ಸುದೀಪ್ ವೀಕ್ಷಿಸಿದ್ದು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ತಂಡಕ್ಕೆ ಆನೆಬಲ ತಂದುಕೊಟ್ಟಿದೆ.
Advertisement
ಚಿತ್ರವೊಂದು ದೇಶಭಕ್ತಿ ಎಳೆಯಲ್ಲಿ ತಯಾರಾದ ಒಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎಲ್ಲಾ ರೀತಿಯ ಪ್ರೇಕ್ಷಕರನ್ನ ಸೆಳೆಯುವುದು ಫಿಕ್ಸ್ ಅನ್ನುತ್ತಿದೆ ಚಿತ್ರತಂಡ. ಹೀಗಾಗಿ ಸ್ವಾತಂತ್ರೋತ್ಸವ ದಿನಾಚರಣೆಯ ವಾರದಲ್ಲಿಯೇ ಚಿತ್ರ ಬಿಡುಗಡೆಯಾಗುತ್ತಿದೆ. ಅದೇನೇ ಇದ್ರೂ ಕೋಟ್ಯಾನುಕೋಟಿ ಕನ್ನಡಿಗರ ಕುತೂಹಲಕ್ಕೆ ಇಂದು ಉತ್ತರ ಕೊಡಲಿದೆ `ಮಾಸ್ ಲೀಡರ್’.
Advertisement
https://www.youtube.com/watch?v=v5vFAw_tTok