ಬೆಂಗಳೂರು: ಚಂದ್ರಗ್ರಹಣ ಹಿನ್ನೆಲೆಯಲ್ಲಿ ತಿರುಪತಿ ವೆಂಕಟೇಶ್ವರ ಸನ್ನಿದ್ಧಿ ಸೇರಿದಂತೆ ಕರ್ನಾಟಕ ಸೇರಿ ದೇಶದ ಬಹುತೇಕ ದೇವಸ್ಥಾನಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಪೂಜೆ ಮುಗಿಸಿ ಬಾಗಿಲು ಹಾಕಲಾಗಿತ್ತು. ಇಂದು ಬೆಳಗ್ಗಿನಿಂದಲೇ ಮತ್ತೆ ಪೂಜಾ ಕೈಂಕರ್ಯ ಆರಂಭವಾಗಿದೆ.
ಗ್ರಹಣ ಹಿನ್ನೆಲೆಯಲ್ಲಿ ದೇಗುಲ ಶುದ್ಧೀಕರಣ ಬಳಿಕ ನಿತ್ಯ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ. ಇತ್ತ ಗ್ರಹಣ ಆರಂಭವಾದ ಕೂಡಲೇ ಹೊರನಾಡಿನ ಅನ್ನಪೂರ್ಣೆಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ರಾತ್ರಿ ಜಲಾಭಿಷೇಕ ಮೂಲಕ ಪ್ರಾರ್ಥಿಸಲಾಯ್ತು.
ಗ್ರಹಣ ಹೊತ್ತಲ್ಲೇ ಉಡುಪಿಯ ಕೃಷ್ಣಮಠದಲ್ಲಿ ಶಾಂತಿ ಹೋಮ ನಡೀತು. ರಾಶಿದೋಷ ಪರಿಹಾರಕ್ಕೆ ಮಧ್ವ ಮಂಟಪದಲ್ಲಿ ನಡೆದ ಹೋಮದಲ್ಲಿ ಭಕ್ತರು ಪಾಲ್ಗೊಂಡಿದ್ರು. ಬೆಂಗಳೂರಿನ ಕೆಆರ್ ರಸ್ತೆಯ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಚಂದ್ರಗ್ರಹಣದ ಸ್ಪರ್ಶ ವೇಳೆಯಿಂದ ಗ್ರಹಣ ಮುಗಿಯುವವರೆಗೂ ಗ್ರಹಣ ಶಾಂತಿ ಹೋಮ ಮಾಡಲಾಯ್ತು. ಗ್ರಹಣ ಶಾಂತಿ ಹೋಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ರು. ಇದನ್ನೂ ಓದಿ: ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ
ದಾವಣಗೆರೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಶುದ್ಧಿ ಮಾಡಿ ಪೂಜಾ ಕೈಕರ್ಯಗಳನ್ನು ನೆರವೇರಿಸಲಾಯಿತು. ಅದರಲ್ಲೂ ಪ್ರಮುಖವಾಗಿ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಚಂದ್ರ ಗ್ರಹಣ ಮುಗಿದ ನಂತರ ದೇವಸ್ಥಾನವನ್ನು ನೀರಿನಿಂದ ಸ್ಚಚ್ಚಗೊಳಿಸಲಾಯಿತು. ಅಲ್ಲದೇ ವೆಂಕಟೇಶ್ವರ ವಿಗ್ರಹಕ್ಕೆ ಮೊದಲು ಜಲಾಭಿಷೇಕ ನಡೆಸಿ ಶುದ್ಧಿಗೊಳಿಸಿದ್ರು. ನಂತರ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಿದ್ರು.
ಕೇತುಗ್ರಸ್ಥ ಚಂದ್ರಗ್ರಹಣ ಮುಕ್ತಾಯ ಹಿನ್ನಲೆಯಲ್ಲಿ ನಗರದ ದೇವಸ್ಥಾನ ಗಳು ಓಪನ್ ಆಗಿದ್ದು, ನೀರು ಹಾಕಿ ದೇವಸ್ಥಾನವನ್ನು ಶುಚಿತ್ವ ಮಾಡಲಾಗುತ್ತಿದೆ. ನಂತ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗತ್ತದೆ. ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ನೀರು ಹಾಕಿ ಶುಚಿತ್ವ ಮಾಡಲಾಗುತ್ತಿದೆ. ಬಳಿಕ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಪಂಚಕಾವ್ಯದಿಂದ ಪುಣ್ಯಾರ್ಚನೆ ಮಾಡಲಾಗತ್ತೆ. ನಂತ್ರ ದೇವರಿಗೆ ಕ್ಷೀರಾಭೀಷೇಕ, ಶಿವನಿಗೆ ರುದ್ರಾಭೀಷೇಕ. ದೀಪ ನೈವೇದ್ಯ, ಮಹಾಮಂಗಳಾರತಿ. ನಂತರ ನವಗ್ರಹ ದೇವತೆಗಳಿಗೆ ಮೊಸರು, ಸಕ್ಕರೆ, ಪನೀರು ಎಳೆನೀರು, ಎಣ್ಣೆ ತುಪ್ಪ, ಗಂಧದಿಂದ ಕ್ಷೀರಾಭೀಷೇಕ ಮಾಡಲಾಗತ್ತದೆ. ನಂತ್ರ ವಿಶೇಷವಾಗಿ ಹೋಮ ನಡೆಯತ್ತದೆ.