ಕೋಲಾರ: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಿಎಂ ಆಗಲಿ ಎಂದು ಅವರ ಅಭಿಮಾನಿಗಳು ಕೋಲಾರದಲ್ಲಿ (Kolar) ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೋಲಾರ ನಗರದ ಕೋಟೆ ಬಡಾವಣೆಯಲ್ಲಿ ನೆಲೆಸಿರುವ ಶಕ್ತಿ ದೇವತೆ ಕೋಲಾರಮ್ಮಗೆ (Kolaramma Temple) ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಡಿಸಿಎಂ ಡಿಕೆಶಿ ಸಿಎಂ ಆಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಭಿತ್ತಿ ಪತ್ರಗಳನ್ನ ಹಿಡಿದು ಡಿಸಿಎಂ ಡಿಕೆಗೆ ಜೈಕಾರ ಕೂಗಿದರು. ಹತ್ತಾರು ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಕಸ ಸೋರಿಕೆ – GBA ಕಸದ ಲಾರಿಗೆ ಬಿತ್ತು 10,000 ರೂ. ದಂಡ

ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸುಜಿತ್ ಗೌಡ ವಿಶೇಷ ಪೂಜೆ ಸಲ್ಲಿಸಿ ಡಿಕೆಶಿ ಮುಂದೆ ಸಿಎಂ ಆಗಲಿ ಎಂದು ಹೇಳಿದರು. ಇನ್ನೂ ದೇವಾಲಯದ ಆವರಣದಲ್ಲೆ ಈಡುಗಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನೂ ಇದೆ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನ ಬಿಟ್ಟು ಕೊಡಲಿ ಎಂದು ಪ್ರಾರ್ಥನೆ ಮಾಡಿದರು. ಅಲ್ಲದೆ ಡಿಕೆಶಿ ಸಿಎಂ ಆದ್ರೆ ಹಲವು ಕೋರಿಕೆ ಗಳನ್ನು ತಾಯಿಗೆ ಈಡೇರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಹಳದಿ ಪೇಟ ಗಲಾಟೆ – ಕಲಾಪ ಮುಂದೂಡಿಕೆ

