ವಯನಾಡು: ಮತದಾನಕ್ಕೆ ಬಂದ ಮತದಾರರು ಸಾಲಲ್ಲಿ ನಿಲ್ಲಬಾರದು, ಬಿಸಿಲಿನ ತಾಪ ಅವರಿಗೆ ತಟ್ಟಬಾರದು. ಮತದಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎನ್ನುವ ಉದ್ದೇಶದಲ್ಲಿ ಮಾದರಿ ಮತಗಟ್ಟೆಯನ್ನು ಕೇರಳದ ವಯನಾಡ್ ನಲ್ಲಿ ಸ್ಥಾಪಿಸಲಾಗಿದೆ.
ವಯನಾಡ್ ಕಲ್ಪೇಟಾ ನಗರದಲ್ಲಿ ಇಂತಹದೊಂದು ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ. ಕಲ್ಪೇಟಾದಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ಮೊದಲ ಒಂದು ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಮತಗಟ್ಟೆಯ ಮುಂಭಾಗದಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಬೇಕು. ಮತದಾರರು ಕುಳಿತು ಕೊಳ್ಳುವ ಸ್ಥಳದಲ್ಲಿ ಫ್ಯಾನ್ ವ್ಯವಸ್ಥೆ ಇದೆ. ಅಲ್ಲದೆ ಅವರು ಕಾಫಿ ಕೇಳಿದರೆ ಕಾಫಿ, ಟೀ ಕೇಳಿದರೆ ಟೀ ಕೂಡ ಕೊಡಲಾಗುತ್ತದೆ. ಅವರ ಟೋಕನ್ ನಂಬರ್ ಕೂಗಿದಾಗ ಅವರು ಹೋಗಿ ಮತ ಹಾಕಬಹುದು.
Advertisement
Advertisement
ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.