– ಇತ್ತ ಫೋಟೋದಲ್ಲಿದ್ದವನೇ ಮದ್ವೆಯಾದ!
ಹಾಸನ: ವರನ ವಾಟ್ಸಪ್ ಗೆ ಮೂರು ಫೋಟೋಗಳು ಬಂದಿದ್ದು, ಅವುಗಳನ್ನು ನೋಡಿ ವರ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದನು. ಪರಿಣಾಮ ಮದುವೆ ಮನೆಯಲ್ಲಿ ಕೆಲಕಾಲ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗುರುವಾರ ಶೃತಿ ಹಾಗೂ ತಾರೇಶ್ ವಿವಾಹ ನಿಗದಿಯಾಗಿತ್ತು. ಆದ್ದರಿಂದ ಬುಧವಾರ ಸಂಜೆಯೇ ವಧು-ವರರ ಸಂಬಂಧಿಕರು ಮದುವೆ ಛತ್ರಕ್ಕೆ ಬಂದು ಶಾಸ್ತ್ರ ಸಂಪ್ರದಾಯವನ್ನು ನೆರವೇರಿಸಿದ್ದರು. ಮರುದಿನ ಮದುವೆ ನಡೆಯಲಿದ್ದು, ಅದೇ ದಿನ ಮುಂಜಾನೆ ವರ ತಾರೇಶ್ ಮೊಬೈಲಿಗೆ ಅಪರಿಚಿತರು ಮೂರು ಫೋಟೋವನ್ನು ಕಳುಹಿಸಿದ್ದಾರೆ.
Advertisement
Advertisement
ತನ್ನ ಮೊಬೈಲಿಗೆ ಬಂದ ಫೋಟೋಗಳನ್ನು ನೋಡಿದ ತಕ್ಷಣ ವರ ತಾರೇಶ್, ವಧುವಿಗೆ ಬೇರೊಬ್ಬರ ಜೊತೆ ಸಂಬಂಧ ಇರುವುದಾಗಿ ಆರೋಪ ಮಾಡಿದ್ದಾನೆ. ಅಷ್ಟೇ ಅಲ್ಲದೇ ತಾಳಿ ಕಟ್ಟಲು ಇನ್ನೂ ಎರಡು ಗಂಟೆ ಮುಂಚೆ ಮದುವೆ ಬೇಡವೆಂದು ವರ ತಾರೇಶ್ ಹಠ ಹಿಡಿದ್ದಿದ್ದಾನೆ. ಕೊನೆಗೆ ಮದುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ.
Advertisement
ಈ ಬಗ್ಗೆ ವಿಷಯ ತಿಳಿದು ಮದುವೆ ಮಂಟಪಕ್ಕೆ ಫೋಟೋದಲ್ಲಿದ್ದ ಯುವಕ ಅಭಿಲಾಷ್ ಬಂದಿದ್ದಾನೆ. ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸರು ಬಂದಿದ್ದಾರೆ. ಆಗ ಮಾತುಕತೆ ನಡೆಸಿ ವಧುವಿನ ಹೇಳಿಕೆಯನ್ನು ಪಡೆದುಕೊಂಡಿದ್ದು, ಕೊನೆಗೆ ತನ್ನಿಂದ ಯುವತಿ ಮದುವೆ ನಿಲ್ಲುವುದು ಬೇಡೆಂದು ಶೃತಿಯನ್ನು ಅಭಿಲಾಷ್ ಮದುವೆಯಾಗಿದ್ದಾನೆ. ಪೊಲೀಸರ ಸಮ್ಮುಖದಲ್ಲಿ ಶೃತಿ ಮತ್ತು ಅಭಿಲಾಷ್ ವಿವಾಹ ನಡೆದಿದೆ.
Advertisement
ವರನ ವಾಟ್ಸಪ್ ಗೆ ಬಂದ ಫೋಟೋ
ಫೋಟೋದಲ್ಲಿ ಅಭಿಲಾಷ್ ಯಾರು ಮತ್ತು ಯಾವ ಫೋಟೋ?
ಅಭಿಲಾಷ್ ಕಚೇರಿಯಲ್ಲಿ ವಧು ಶೃತಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆದ್ದರಿಂದ ಇವರಿಬ್ಬರಿಗೂ ಪರಿಚಯ ಸ್ನೇಹವಿತ್ತು. ಈ ವೇಳೆ ತನ್ನ ಕಚೇರಿ ಮಾಲೀಕನ ಮನೆ ಗೃಹ ಪ್ರವೇಶಕ್ಕೆ ಶೃತಿ ಹೋಗಿದ್ದಳು. ಆಗ ಅವರೊಟ್ಟಿಗೆ ಶೃತಿ ಫೋಟೋ ತೆಗೆಸಿಕೊಂಡಿದ್ದಳು. ಇನ್ನೊಂದು ಕಾರಿನಲ್ಲಿ ಕುಳಿತ ಒಂದು ಸೆಲ್ಫಿ ಫೋಟೋ ಮತ್ತೊಂದು ಗೃಹ ಪ್ರವೇಶದಲ್ಲಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು. ಈ ಮೂರು ಫೋಟೋವನ್ನು ನೋಡಿ ವರ ವಧುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದನು.
ವರನ ವಾಟ್ಸಪ್ ಗೆ ಬಂದ ಫೋಟೋ
ಅಭಿಲಾಷ್ ವಧು ಶೃತಿಯನ್ನು ಪ್ರೀತಿಸುತ್ತಿದ್ದನು. ಆದರೆ ಈ ಬಗ್ಗೆ ವಧುವಿನ ಮನೆಯವರಿಗೆ ವಿಚಾರ ತಿಳಿದಿರಲಿಲ್ಲ. ಆದ್ದರಿಂದ ಆತನೇ ಈ ರೀತಿ ಬೇರೆ ನಂಬರ್ ನಿಂದ ವರನಿಗೆ ಫೋಟೋ ಕಳುಹಿಸಿದ್ದಾನೆ ಎಂದು ಜನರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv