ಬೆಂಗಳೂರು: ಪ್ರೇಕ್ಷಕರ ಜನಪ್ರಿಯವಾದ ರಿಯಾಲಿಟಿ ಶೋ ‘ಬಿಗ್ಬಾಸ್’ ನ 6ನೇ ಆವೃತ್ತಿ ಕಳೆದ ಭಾನುವಾರಷ್ಟೆ ಪ್ರಾರಂಭವಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ಶೋಗೆ 18 ಸ್ಪರ್ಧಿಗಳು ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ಇಂದು ಭಾನುವಾರ ಆದ್ದರಿಂದ ಬಿಗ್ ಮನೆಗೆ ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವಿಶೇಷ ಅತಿಥಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
Advertisement
Advertisement
ಶಿವರಾಜ್ ಕುಮಾರ್ ಅವರು ಬಿಗ್ ಮನೆಗೆ ಹೋಗಿರುವ ಎಪಿಸೋಡ್ ಇಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವರಾಜ್ ಕುಮಾರ್ ಜೊತೆ ನಟ ಮತ್ತು ನಿರ್ದೇಶಕ ಪ್ರೇಮ್ ಕೂಡ ವಿಶೇಷ ಅತಿಥಿಯಾಗಿ ಹೋಗಲಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರೇಮ್ ಅವರು 17 ಸ್ಪರ್ಧಿಗಳ ಜೊತೆ ಮಾತನಾಡುವ ಮೂಲಕ ಅವರ ಜೊತೆ ಸಮಯ ಕಳೆಯಲಿದ್ದಾರೆ.
Advertisement
ಬಿಗ್ ಮನೆಯಲ್ಲಿ ಒಂದು ವಾರದಿಂದ ಒಬ್ಬೊಬ್ಬರನ್ನು ಪರಿಚಯ ಮಾಡಿಕೊಂಡು ಸಮಯವನ್ನು ಕಳೆದಿದ್ದರು. ಆದರೆ ಶನಿವಾರಷ್ಟೆ 18 ಸ್ಪರ್ಧಿಗಳಲ್ಲಿ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರವೇ ಕ್ರಿಕೆಟ್ ಆಟಗಾರ್ತಿ ರಕ್ಷಿತಾ ರೈ ಅವರು ಬಿಗ್ ಮನೆಯಿಂದ ಹೊರಬಂದಿದ್ದಾರೆ. ಇನ್ನೂ ಬಿಗ್ಬಾಸ್ ಮನೆಯಲ್ಲಿ 17 ಸ್ಪರ್ಧಿಗಳಿದ್ದಾರೆ.
Advertisement
ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಅವರು ಆರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಾರಿ ಬಿಗ್ಬಾಸ್ ಮನೆಗೆ ಸಾಮಾನ್ಯರು ಸೇರಿದಂತೆ, ಕಿರುತೆರೆ ನಟಿ, ನಟರು ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಬಿಗ್ಬಾಸ್ 6ನೇ ಆವೃತ್ತಿಯ ವಿಶೇಷ ಏನೆಂದರೆ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv