ರಾಯಚೂರು: ಶ್ರೀ ರಾಮನವಮಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಸ್ಟೇಷನ್ ರಸ್ತೆಯ ರಾಮ ಮಂದಿರದಲ್ಲಿ ಈ ಬಾರಿ ವಿಶೇಷವಾಗಿ ಅಯೋಧ್ಯ ರಾಮ ಮಂದಿರದ ಮಾದರಿಯನ್ನ ಥರ್ಮಕೋಲ್‍ನಿಂದ ತಯಾರಿಸಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತಿದೆ.
Advertisement
ಸೀತಾರಾಮರಿಗೆ ನಾನಾ ಬಗೆಯ ಹಣ್ಣುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ದ್ರಾಕ್ಷಿ, ಬಾಳೆಹಣ್ಣು, ಸೇಬು, ಪೈನಾಪಲ್ ಹಣ್ಣುಗಳ ಅಲಂಕಾರ ಭಕ್ತರನ್ನ ಸೆಳೆಯುತ್ತಿದೆ. ಪಂಚಾಮೃತ ಅಭಿಷೇಕ, ಪ್ರತ್ಯೇಕ ಪೂಜೆ, ಅಲಂಕಾರ ಸೇವೆ, ತೊಟ್ಟಿಲಲ್ಲಿ ರಾಮನನ್ನ ತೂಗುವ ಮೂಲಕ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ಸಂಜೆ ಆರು ಗಂಟೆಯಿಂದ ಹತ್ತು ಗಂಟೆವರೆಗೆ ಧರ್ಮದರ್ಶನ ಏರ್ಪಡಿಸಲಾಗಿದೆ.
Advertisement
Advertisement
ರಾಮ ಜನನದ ಈ ದಿನದಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಅನ್ನೋ ನಂಬಿಕೆಯಿದೆ. ನಗರದ ಶ್ರೀರಾಮನಗರ ಕಾಲೋನಿಯ ಕೊದಂಡರಾಮ ದೇವಾಲಯ, ಗಂಗಾ ನಿವಾಸದ ರಾಮ ದೇವಾಲಯದಲ್ಲಿ ಮಾರ್ಯಾದಾ ಪುರುಷೋತ್ತಮನಿಗೆ ವಿಶೇಷ ಪೂಜೆಗಳನ್ನ ಸಲ್ಲಿಸಲಾಗುತ್ತಿದೆ.
Advertisement