Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್‌ ಕಾರ್ಯಾಚರಣೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್‌ ಕಾರ್ಯಾಚರಣೆ?

Latest

ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್‌ ಕಾರ್ಯಾಚರಣೆ?

Public TV
Last updated: April 5, 2026 12:01 pm
Public TV
Share
3 Min Read
HH 60W Jolly Green II
SHARE

-‌ ಇರಾನ್‌ ಕೋಟೆಗೆ ನುಗ್ಗಿದ ನೂರಾರು ವಿಶೇಷ ಪಡೆಗಳು, ಡಜನ್‌ಗಟ್ಟಲೇ ವಿಮಾನಗಳು

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿನ ಯುದ್ಧದ (Middle East War) ಭೀಕರತೆ 37ನೇ ದಿನವೂ ಮುಂದುವರಿದಿದೆ. ಈ ಮಧ್ಯೆ ಅಮೆರಿಕ ಸೇನೆಯಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಇರಾನ್‌ನಲ್ಲಿ ಕಾಣೆಯಾಗಿದ್ದ ಅಮೆರಿಕ ವಾಯುಪಡೆಯ ಮತ್ತೋರ್ವ ಫೈಟರ್‌ ಪೈಲಟ್‌ (Fighter Pilo) ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದೃಢಪಡಿಸಿದ್ದಾರೆ.

US F15 Fighter Jet 2

ದಕ್ಷಿಣ ಇರಾನ್‌ನಲ್ಲಿ ಯುಎಸ್‌ ವಾಯುಪಡೆಯ F-15E ಸ್ಟ್ರೈಕ್‌ ಈಗಲ್‌ (F-15E Strike Eagle) ಫೈಟರ್‌ ಜೆಟ್‌ ಹೊಡೆದುರುಳಿಸಿದ ಬಳಿಕ ಅಮೆರಿಕ ಸೇನೆಯು ಇಬ್ಬರು ಪೈಲಟ್‌ಗಳಿಗಾಗಿ ಹುಡುಕಾಟ ನಡೆದಿತ್ತು. ಈ ವೇಳೆ ಓರ್ವ ಫೈಟರ್‌ ಪೈಲಟ್‌ ಅನ್ನು ತ್ವರಿತವಾಗಿ ರಕ್ಷಣೆ ಮಾಡಲಾಗಿತ್ತು. ಮತ್ತೊಬ್ಬ ಪೈಲಟ್‌ಗಾಗಿ ಹುಡುಕಾಟ ಮುಂದುವರಿಸಿತ್ತು. ಇದೀಗ ಟ್ರಂಪ್‌, ತಮ್ಮ ಇಬ್ಬರೂ ಪೈಲಟ್‌ಗಳನ್ನ ರಕ್ಷಣೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: We’re in war – ಅಮೆರಿಕದ ಫೈಟರ್‌ ಜೆಟ್‌ ಪತನದ ಬಗ್ಗೆ ಟ್ರಂಪ್‌ ಫಸ್ಟ್‌ ರಿಯಾಕ್ಷನ್‌

US Jet 2

ಗುಂಡುಗಳೊಂದಿಗೆ ಹಲವು ಗಂಟೆಗಳ ಹೋರಾಟ
ಅಮೆರಿಕ ವಾಯುಪಡೆಯ ಅಧಿಕಾರಿಗಳು ಹೇಳುವಂತೆ, F-15E Strike Eagle ಜೆಟ್‌ ಪತನದ ನಂತರ ಎಜೆಕ್ಟ್‌ ಆಗಿದ್ದ ಫೈಟರ್‌ ಪೈಲಟ್‌ಗಳು ಇರಾನಿನ ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದ ಅಮೆರಿಕ ಮಿಲಿಟರಿ ಪಡೆ ಅವರಿದ್ದ ಸ್ಥಳವನ್ನ ಪತ್ತೆಹಚ್ಚಿ, ರಕ್ಷಣೆ ಮಾಡಿತು. ಈ ಸಂದರ್ಭ ಅತ್ಯಂತ ಅಪಾಯಕಾರಿಯಾಗಿತ್ತು, ರಕ್ಷಣಾ ಕಾರ್ಯಾಚರಣೆ ವೇಳೆ ಯುಎಸ್‌ ಪಡೆ ಭಾರೀ ಗುಂಡಿನ ದಾಳಿ ಎದುರಿಸಿ ಹಲವು ಗಂಟೆಗಳ ಕಾಲ ಹೋರಾಟ ನಡೆಸಿತ್ತು. ಈ ಬೆಳವಣಿಗೆ ನಂತರ ಇಬ್ಬರು ಪೈಲಟ್‌ಗಳನ್ನ ಅಮೆರಿಕ ವಾಯುಪಡೆ ರಕ್ಷಣೆ ಮಾಡಿದೆ ಎಂದು ಟ್ರಂಪ್‌ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ: 48 ಗಂಟೆಗಳಲ್ಲಿ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ: ಟ್ರಂಪ್ ವಾರ್ನಿಂಗ್

US F15 Fighter Jet 3

ಅಮೆರಿಕ ಪಡೆಗಳ ಶಕ್ತಿ ಪ್ರದರ್ಶನ ಹೇಗಿತ್ತು?
ಇರಾನ್‌ನಿಂದ ನಿರಂತರ ಕ್ಷಿಪಣಿ ಮತ್ತು ರಾಡಾರ್‌ ವ್ಯವಸ್ಥೆಗಳ ಬೆದರಿಕೆಯ ನಡುವೆಯೂ ಅಮೆರಿಕ ಪಡೆಯ ಶೋಧ ಕಾರ್ಯ ಅತ್ಯಂತ ಅದ್ಭುತವಾಗಿತ್ತು ಎಂದು ಟ್ರಂಪ್‌ ಹೊಗಳಿಸಿದ್ದಾರೆ. ಇದಕ್ಕಾಗಿ ಯುಎಸ್‌ ಪಡೆಗಳು HH-60W ಜಾಲಿ ಗ್ರೀನ್ II‌ ರಕ್ಷಣಾ ಹೆಲಿಕಾಪ್ಟರ್‌ಗಳು, A-10 ವಾರ್ಥಾಗ್ ಫೈಟರ್‌ ಜೆಟ್‌ಗಳು, HC-130 ರಕ್ಷಣಾತ್ಮಕ ಮಿಡ್-ಏರ್ ಟ್ಯಾಂಕರ್, ರಾಡಾರ್‌ ಕಣ್ತಪ್ಪಿಸುವ F-35s ಸ್ಟೆಲ್ತ್‌ ಜೆಟ್‌ಗಳು ಹಾಗೂ ವಿಶೇಷ ರಕ್ಷಣಾ ಘಟಕಗಳನ್ನ ಕಾರ್ಯಾಚರಣೆಗೆ ಬಳಸಿತ್ತು ಅನ್ನೋದು ಗೊತ್ತಾಗಿದೆ.

ಪೈಲಟ್‌ ರಕ್ಷಿಸಿದ್ದೇ ರೋಚಕ?
ಇರಾನ್‌, ಅಮೆರಿಕದ ಎಫ್‌-15 ಫೈಟರ್‌ ಜೆಟ್‌ ಹೊಡೆದುರುಳಿಸಿದ ನಂತರ, ಫೈಟರ್‌ ಪೈಲಟ್‌ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿ ಸುರಕ್ಷಿತವಾಗಿ ಎಜೆಕ್ಟ್‌ ಆಗಿದ್ದರು. ಬಳಿಕ ತಮ್ಮ ಸಂವಹನ ವ್ಯವಸ್ಥೆಗಳ ಮೂಲಕ ಅಮೆರಿಕ ಪಡೆಗಳೊಂದಿಗೆ ಸಂಪರ್ಕ ಸಾಧಿಸಿದರು. ಇದನ್ನೂ ಓದಿ: Terminated – ಬೃಹತ್‌ ದಾಳಿಯಲ್ಲಿ ಇರಾನ್‌ ಮಿಲಿಟರಿ ಪಡೆಯ ಟಾಪ್‌ ಕಮಾಂಡರ್‌ಗಳ ಹತ್ಯೆ: ಟ್ರಂಪ್‌

US F15 Fighter Jet

F-15 ಜೆಟ್‌ ಹೊಡೆದುರುಳಿದ ಹಲವಾರು ಗಂಟೆಗಳ ನಂತರ ಯುಸ್‌ ಪೈಲಟ್‌ ಅನ್ನು ರಕ್ಷಣೆ ಮಾಡಲಾಯಿತು. ಈ ರಕ್ಷಣಾ ಕಾರ್ಯದ ಸಮಯದಲ್ಲಿ ಯುಎಸ್‌ನ ಬ್ಲ್ಯಾಕ್‌ಹಾಕ್‌ ಹೆಲಿಕಾಪ್ಟರ್‌ ಅನ್ನು ಇರಾನ್‌ ಹೊಡೆದುರುಳಿಸಿತು. ಇದು ಹಾರಲು ಸಾಧ್ಯವಾದರೂ ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನ ಪತ್ತೆಹಚ್ಚಲು ಮತ್ತು ರಕ್ಷಿಸಲು ಒಂದು ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಕೇಂದ್ರ ಗುಪ್ತಚರ ಸಂಸ್ಥೆ ಮಾಹಿತಿ ಆಧರಿಸಿ ಪೈಲಟ್‌ ಇರುವಿಕೆಯನ್ನು ಪತ್ತೆಹಚ್ಚಿದ ಯುಎಸ್‌ ಪಡೆಗಳು 24 ಗಂಟೆಗಳ ಸತತ ಹೋರಾಟದ ಬಳಿಕ ಸುರಕ್ಷಿತವಾಗಿ ರಕ್ಷಣೆ ಮಾಡಿದವು. ಒಂದು ಕಡೆ A-10 ವಾರ್ಥಾಗ್‌ ಜೆಟ್‌ಗಳು ವಾಯುರಕ್ಷಣಾ ವ್ಯವಸ್ಥೆ ಒದಗಿಸಿದ್ರೆ, ಮತ್ತೊಂದು ಕಡೆಯಿಂದ ಬ್ಲಾಕ್‌ಹಾಕ್‌ ಚಾಪರ್‌ಗಳು ಶತ್ರಿಗಳ ಗುಂಡಿನ ದಾಳಿಯನ್ನ ಎದುರಿಸಿ, ಪೈಲಟ್‌ ಅನ್ನು ಸುರಕ್ಷಿತವಾಗಿ ಕರೆತಂದಿತು ಎಂದು ಅಮೆರಿಕದ ಅಧಿಕಾರಿಗಳು ವಿವರಿಸಿದ್ದಾರೆ.

ಪೈಲಟ್‌ಗೆ ಗಾಯ
ಇನ್ನೂ ಫೈಟರ್‌ ಪೈಲಟ್‌ ಅನ್ನು ಸುರಕ್ಷಿತವಾಗಿ ಕರೆ ಕರೆತರಲು ನಾವು ವಿಶ್ವದ ಅತ್ಯಂತ ಮಾರಕ ಆಯುಧಗಳನ್ನ ಬಳಸಿದೆವು, ಡಜನ್ಗಟ್ಟಲೆ ವಿಮಾನಗಳು ನೂರಾರು ಸಿಬ್ಬಂದಿ ವಿಶೇಷ ಕಾರ್ಯಪಡೆಯನ್ನ ಕಳುಹಿಸಲಾಗಿತ್ತು. ಈ ವೇಳೆ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದ್ರೆ ಒಬ್ಬನೇ ಒಬ್ಬ ಅಮೆರಿಕನ್‌ ಸೈನಿಕನ ಪ್ರಾಣಕ್ಕೆ ಕುತ್ತು ತರದಂತೆ ಈ ಕಾರ್ಯಾಚರಣೆ ಪೂರ್ಣಗೊಳಿಸಿದ್ದೇವೆ. ಅಲ್ಲದೇ ಇದು ಇರಾನಿನ ಮೇಲೆ ನಮ್ಮ ಸಂಪೂರ್ಣ ವಾಯು ಪ್ರಾಬಲ್ಯ ಪ್ರದರ್ಶಿಸುತ್ತದೆ ಎಂದು ಟ್ರಂಪ್‌ ಬೆನ್ನುತಟ್ಟಿಕೊಂಡಿದ್ದಾರೆ.

TAGGED:donald trumpF15 Fighter JetFighter PilotRescue MissingUS Iran WarUS Militaryಅಮೆರಿಕ ಇರಾನ್‌ ಯುದ್ಧಎಫ್‌-15ಇ ಫೈಟರ್‌ ಜೆಟ್‌ಡೊನಾಲ್ಡ್ ಟ್ರಂಪ್ಫೈಟರ್ ಪೈಲಟ್
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Auto Gas 1
Bagalkot

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ, ವದಂತಿಗೆ ಕಿವಿಗೊಡಬೇಡಿ: ಆಹಾರ ಇಲಾಖೆ

Public TV
By Public TV
9 minutes ago
LPG refills 3
Latest

ಪ್ರಮುಖ ವಲಯಗಳಿಗೆ ಹೆಚ್ಚಿನ ಎಲ್‌ಪಿಜಿ ಹಂಚಿಕೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Public TV
By Public TV
18 minutes ago
no stock at 5 out of 6 petrol stations in soraba
Districts

ಸೊರಬದ 6 ಪೆಟ್ರೋಲ್‌ ಬಂಕ್‌ಗಳಲ್ಲಿ 5ರಲ್ಲಿ ನೋ ಸ್ಟಾಕ್‌ – ಉಳಿದ ಒಂದೇ ಬಂಕ್‌ಗೆ ಮುಗಿಬಿದ್ದ ಜನ

Public TV
By Public TV
21 minutes ago
ಸಾಂದರ್ಭಿಕ ಚಿತ್ರ
Bagalkot

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

Public TV
By Public TV
28 minutes ago
Karwar Car Acident
Crime

ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ – ಸಾವಿನ ಸುತ್ತ ಅನುಮಾನದ ಹುತ್ತ

Public TV
By Public TV
53 minutes ago
40 49 kg of Ganja worth Rs 20 24 lakh seized at Ballari railway station accused escape
Bellary

ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ 20.24 ಲಕ್ಷ ಮೌಲ್ಯದ 40.49 ಕೆಜಿ ಗಾಂಜಾ ಜಪ್ತಿ – ಆರೋಪಿಗಳು ಎಸ್ಕೇಪ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?