ಮಡಿಕೇರಿ: ಕೊಡಗಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲಿ ಫುಡ್ ಫೆಸ್ಟನ್ನು ಆಯೋಜಿಸಲಾಗಿತ್ತು. ಈ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸ್ಪೆಷಲ್ ಸ್ವಾದಿಷ್ಟ ಖಾದ್ಯಗಳನ್ನ ಉಣಬಡಿಸಿದ್ದಾರೆ. ಪಂದಿ ಕರಿ, ಕೋಳಿ ಕರಿ, ಕೊಯಿಲೆ ಮೀನ್, ಒಣಕ್ ಯರ್ಚಿ, ಅಡಿಕೆ ಪುಟ್, ಕರ್ಜಿಕಾಯಿ, ಕಾಡ್ ಮಾಂಗೆ, ಕೇಂಬು ಕರಿ, ಇವು ಕೊಡಗಿನಲ್ಲಿ ಸಿಗುವ ವಿಶೇಷ ಖಾದ್ಯಗಳ ಹೆಸರುಗಳಾಗಿವೆ.
Advertisement
Advertisement
ಭಾಷೆ, ಸಂಸ್ಕೃತಿಯಂತೆ, ಕೊಡಗಿನ ಆಹಾರ ಪದ್ಧತಿ ಕೂಡಾ ಇತರೆಡೆಗಿಂತ ತೀರಾ ಭಿನ್ನವಾಗಿದ್ದು, ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ. ಈ ಹಬ್ಬದಲ್ಲಿ ಕೊಡವ ನಾರಿಯರು ರುಚಿ ರುಚಿಯಾದ ಕೂರ್ಗ್ ಸ್ಪೆಷಲ್ ಡಿಷ್ ಗಳನ್ನ ಮಾಡಿ ಗಮನ ಸೆಳೆದಿದ್ದಾರೆ.
Advertisement
Advertisement
ಮಳೆಗಾಲದಲ್ಲಿ ಕೊಡಗಿನ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಬದಲಾಗುತ್ತದೆ. ವಿಪರೀತ ಮಳೆ ಹಗೂ ಶೀತ ವಾತಾವರಣವಿರುವುದರಿಂದ ಮಳೆಗಾಲದಲ್ಲಿ ಕೊಡಗಿನ ಜನ ಹೆಚ್ಚು ಉಷ್ಣಾಂಶವುಳ್ಳ ಆಹಾರ ಪಧಾರ್ಥಗಳನ್ನೆ ಸೇವಿಸುತ್ತಾರೆ. ಬಿದಿರಿನ ಕಳಲೆ, ಏಡಿ, ಕೆಸ ಸೊಪ್ಪು, ಅಣಬೆ ಇವೆಲ್ಲಾ ಇಲ್ಲಿನ ಮಳೆಗಾಲದ ಫೆವರೀಟ್ ಆಹಾರ ವಸ್ತುಗಳು, ಇಂತಹ ಸುಮಾರು 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಈ ಮೇಳದಲ್ಲಿ ತಯಾರಾಗಿದ್ದವು, ಹಿಂದಿನ ಕಾಲದ ಆಹಾರ ಪದ್ಧತಿಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಫುಡ್ ಫೆಸ್ಟ್ ಅನ್ನ ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಈ ಕೂರ್ಗ್ ಸ್ಪೆಷಲ್ ಫುಡ್ ರುಚಿ ಸವಿದಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹೇಳಿದ್ದಾರೆ.