ಬೆಂಗಳೂರು: ಭೂಮಿಯ ಮೇಲೆ ದೈತ್ಯ ಪ್ರಾಣಿ ಡೈನೋಸಾರ್ ಇತ್ತು ಎನ್ನುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಇಂದಿಗೂ ಅದರ ಬಗ್ಗೆ ಸಂಶೋಧನೆ ಮುಂದುವರೆಯುತ್ತಾಲೇ ಇದೆ. ಆದರೆ ಅತಿ ಅಪರೂಪದ ಡೈನೋಸಾರ್ ಮೊಟ್ಟೆ ಬೆಂಗಳೂರಿನಲ್ಲಿ ಇರುವುದು ವಿಶೇಷ.
ಹೌದು. ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಅವರು ಈ ಡೈನೋಸಾರ್ ಮೊಟ್ಟೆಯನ್ನು ತಮ್ಮ ಸಂಶೋಧನೆಗಾಗಿ ತಂದಿಟ್ಟುಕೊಂಡಿದ್ದಾರೆ. 65 ದಶಲಕ್ಷ ವರ್ಷದ ಹಿಂದೆ ಜ್ವಾಲಮುಖಿ ಸ್ಪೋಟದಿಂದ ಕತ್ತಲು ಮತ್ತು ಶೀತಲ ವಾತಾವರಣ ನಿರ್ಮಾಣವಾಗಿತ್ತು. ಆಗ ಬಂದ ಕಪ್ಪು ಹೊಗೆಯಿಂದ ಭೂಮಿಯ ಮೇಲಿದ್ದ ಅಪರೂಪದ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದ್ದವು ಎನ್ನಲಾಗುತ್ತದೆ. ಬಹುತೇಕ ಜೀವಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿತ್ತಂತೆ, ಆಗ ಈ ಅಪರೂಪದ ಡೈನೋಸಾರ್ ಗುಜರಾತ್ ಭಾಗಕ್ಕೆ ಬಂದಿದ್ದು, ಅಲ್ಲಿ 22 ಮೊಟ್ಟೆ ಇಟ್ಟಿತ್ತು ಎನ್ನಲಾಗಿದೆ.
Advertisement
Advertisement
ಆ ಬಳಿಕ ಈ ಪ್ರದೇಶದಲ್ಲಿ ಪ್ರವಾಹ ಬಂದು ಈ ಮೊಟ್ಟೆಯೆಲ್ಲಾ ಭೂಮಿಯ ಒಳಗೆ ಹುಗಿದು ಹೋಗಿತ್ತು. ಈ ವಿಶೇಷ ಮೊಟ್ಟೆಯನ್ನು ಸಂಶೋಧನೆಗಾಗಿ ವಿಜ್ಞಾನಿಗಳು ಹುಡುಕಿ ತಂದಿದ್ದರು. ಅದರಲ್ಲಿ ಒಂದು ಮೊಟ್ಟೆಯನ್ನು ಪ್ರಕಾಶ್ ಅವರು ತಂದು ಸಂಶೋಧನೆಗೆ ಬಳಕೆ ಮಾಡುತ್ತಿದ್ದಾರೆ. ಕಾಲಂತಾರದಲ್ಲಿ ಈ ಡೈನೋಸಾರ್ ಮೊಟ್ಟೆ ಕಲ್ಲಿನ ರೂಪಕ್ಕೆ ಬದಲಾಗಿರೋದು ವಿಶೇಷವಾಗಿದೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.