ರಜೆ ದಿನ ಬಂದರೆ ಸಾಕು ಮನೆಯಲ್ಲಿ ನಾನ್ ವೆಜ್ ಮಾಡಿ ಬಿಸಿಬಿಸಿಯಾಗಿ ಊಟ ಮಾಡಬೇಕು ಅನ್ನಿಸುತ್ತದೆ. ಆದರೆ ಬಿರಿಯಾನಿ, ಚಿಕನ್ ಸಾಂಬಾರ್, ಕಬಾಬ್ ಮಾಡಿ ಬೇಸರವಾಗಿರುತ್ತದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರು ರುಚಿಯಾಗಿ, ಖಾರವಾಗಿ ವಿಶೇಷವಾದ ಏನಾದರೂ ನಾನ್ ವೆಜ್ ಅಡುಗೆ ಮಾಡಿ ಎಂದು ಹೇಳುತ್ತಾರೆ. ಆದ್ದರಿಂದ ನಿಮಗಾಗಿ ಚಿಕನ್ ಸ್ಪೆಷಲ್ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗುವ ಸಾಮಾಗ್ರಿಗಳು
1. ಚಿಕನ್ – 1 ಕೆಜಿ
2. ಈರುಳ್ಳಿ – 1 ದೊಡ್ಡದು
3. ಕೊತ್ತಂಬರಿ + ಪುದೀನಾ – 1 ಬಟ್ಟಲು
4. ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು
5. ಚಕ್ಕೆ – ಚಿಕ್ಕದು
6. ಪಲಾವ್ ಎಲೆ – 1 ದೊಡ್ಡದು
7. ಏಲಕ್ಕಿ – 1-2
8. ಶುಂಠಿ, ಬೆಳ್ಳುಳ್ಳಿ – ಪೇಸ್ಟ್ ಒಂದೂವರೆ ಚಮಚ
9. ಮೊಸರು – 1 ಕಪ್
10. ಕಸುರಿ ಮೇತಿ – ಚಿಟಿಕೆ
11. ಗರಂ ಮಸಾಲ – 1 ಚಮಚ
12. ಕೆಂಪು ಮೆಣಸಿನಕಾಯಿ ಪುಡಿ (ಚಿಲ್ಲಿ ಪೌಡರ್) – 1 ಚಮಚ (ರುಚಿಗೆ ತಕ್ಕಷ್ಟು)
13. ಜೀರಿಗೆ ಪುಡಿ – 1 ಚಮಚ
14. ದನಿಯಾಪುಡಿ – 1 ಚಮಚ
15. ಉಪ್ಪು – ರುಚಿಗೆ ತಕ್ಕಷ್ಟು
16. ತುಪ್ಪ – 4-5 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ, ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ ಪೇಸ್ಟ್ ಮಾಡಿಟ್ಟಿಕೊಳ್ಳಿ.
* ಫ್ರೈ ಮಾಡುವ ಪ್ಯಾನ್ ಗೆ ತುಪ್ಪ ಹಾಕಿ, ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.
* ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
* ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯುವ ತನಕ ಮುಚ್ಚಲ ಮುಚ್ಚಿ ಬೇಯಿಸಿ. (ನೀರು ಹಾಕಬೇಡಿ)
* ಈಗ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮಿಶ್ರಣ ಸೇರಿಸಿ, ನೀರು ಸೇರಿಸಿ ಬೇಯಿಸಿ.
* 2 ನಿಮಿಷ ಬೆಂದ ನಂತ್ರ ಗರಂ ಮಸಾಲ, ಜೀರಾ ಪುಡಿ, ಚಿಲ್ಲಿ ಪೌಡರ್, ದನಿಯಾಪುಡಿ ಸೇರಿಸಿ ನೀರು ಬೇಕಿದ್ದಲ್ಲಿ ಸೇರಿಸಿ ಮುಚ್ಚಲ ಮುಚ್ಚಿ ಬೇಯಿಸಿ. (ರುಚಿ ಕಡಿಮೆ ಇದ್ದರೆ ಟೇಸ್ಟ್ ನೋಡಿ ಸ್ವಲ್ಪ ಹಾಕಿಕೊಳ್ಳಿ)
* ಪ್ಯಾನ್ ಬದಿಯಲ್ಲಿ ಎಣ್ಣೆ ಬಿಟ್ಟುಕೊಂಡ ನಂತ್ರ ಒಮ್ಮೆ ತಿರುಗಿಸಿ ಕೆಳಗಿಳಿಸಿ.
* ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಸರ್ವ್ ಮಾಡಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv