ಗೆಳೆಯ..
ನಿನ್ನ ಒಲವ್ಯಾಕೋ ನನ್ನನ್ನು ಸುಡುತ್ತಿದೆ ಎಂಬ ಭಾವ ನನ್ನನ್ನು ಕಾಡುತ್ತಿದೆ. ನೀನ್ಯಾಕೆ ಈಗೀಗ ಸುಡುವ ಬೆಂಕಿಯಾದೆ? ಮೊದಲೆಲ್ಲ ನಿನ್ನ ಪ್ರೀತಿಯ ತಂಪು ತಂಗಾಳಿಯಲ್ಲಿ ಹಾರಾಡುತ್ತಿದ್ದ ನಾನು, ಈಗ್ಯಾಕೋ ಬಿಸಿ ನೀರಲ್ಲಿ ಸಾವಿನ ಸುಳಿಯಲ್ಲಿ ಸಿಕ್ಕ ಮೀನಿನಂತಾಗಿದ್ದೇನೆ.
ಅದೆಷ್ಟು ಕಾಡಿ ನನ್ನನ್ನು ನೀನು ಒಲಿಸಿ ಕೊಂಡಿದ್ದೆ ನೆನಪಿದ್ಯಾ? ನಾನು ಆಗ ಒಂದು ಲ್ಯಾಬ್‌ನಲ್ಲಿ ಕೆಲಸಕ್ಕೆ ಹೋಗ್ತಿದ್ದೆ. ಕೆಲಸ ಮುಗಿಸಿ ಹೊರಡುವ ಸಮಯದಲ್ಲಿ ನನ್ನ ಸ್ಕೂಟಿ ಪಾರ್ಕ್ ಮಾಡ್ತಿದ್ದ ಜಾಗದಲ್ಲಿ ಕಾದು ನಿಂತಿರ್ತಿದ್ದೆ. ಹೀಗೆ ನೂರಾರು ದಿನ ನಿಂತು, ಮಾತಾಡಿಸಲು ಯತ್ನಿಸಿದ್ದೆ. ಅದೆಷ್ಟೋ ತಿಂಗಳಾದ ಮೇಲೆ ನಾನು ನಿನ್ನೆಡೆಗೆ ತಿರುಗಿ ನೋಡಿದ್ದೆ. ಅದೆಷ್ಟೋ ದಿನ ಕಳೆದ ಮೇಲೆ ಒಂದು ನಗು ಬೀರಿ ಮಾತಾಡಿ, ಹೃದಯವನ್ನ ನಿನಗೊಪ್ಪಿಸಿದ್ದೆ. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

ನನ್ನ ಪಾಲಿಗೆ ಎಲ್ಲಾ ನೀನೇ ಈಗ, ಅಷ್ಟು ಆಪ್ತವಾಗಿದ್ದಿಯ. ಈಗ್ಯಾಕೆ ಸಣ್ಣ ಸಣ್ಣ ವಿಷಯಕ್ಕೂ ಕೋಪ. ಆ ಡ್ರೆಸ್ ಹಾಕಿಕೊಳ್ಬೇಡ. ಅವನು ನಿನ್ನ ಫ್ರೆಂಡಾ? ಅವನ ಹತ್ರ ಮಾತಾಡ್ಬೇಡ? ಯಾಕೆ ಹೀಗೆಲ್ಲ ನಿನ್ನ ಪ್ರಶ್ನೆಗಳು? ನಾನು ನಿನಗೆ ಮೋಸ ಮಾಡ್ಬಿಡ್ತೀನಿ ಅಂತನಾ? ಅಥವಾ ನನ್ನ ಮೇಲೆ ಅಷ್ಟೊಂದು ಅನುಮಾನನಾ? ಇದನ್ನೂ ಓದಿ: ಪ್ರೀತಿ ಕೈಬೀಸಿ ಕರೆಯುವಾಗ ಎಲ್ಲವನ್ನೂ ಬಿಟ್ಬಿಡ್ಬೇಕಂತೆ..!
ನಿನ್ನ ಇಂತಹ ಸಣ್ಣ ಸಣ್ಣ ಮಾತುಗಳು ನಮ್ಮ ಪ್ರೀತಿಯ ದೋಣಿಯಲ್ಲಿ ಬಿರುಕು ಮೂಡಿಸಬಾರದಲ್ವಾ? ನಿನ್ನ ಪ್ರಶ್ನೆಗಳನ್ನೇ ನಾನು ಮಾಡಿದ್ರೆ ನೀನೇನು ಮಾಡ್ತಿದ್ದೆ? ನನ್ನ ಜಾಗದಲ್ಲೂ ನಿಂತು ನೋಡು. ಕಂಡಿತಾ ನನ್ನ ಮಾತುಗಳು ನಿನಗೆ ಸರಿ ಎನಿಸಿದ್ರೆ ಪ್ರೀತಿಯಲ್ಲಿರುವ ನಿನ್ನ ನಂಬಿಕೆ ಎಂತದ್ದು ಎಂದು ನಿನಗೆ ಅರಿವಾಗುತ್ತೆ.
ನನ್ನ ಈ ಪತ್ರ ನಿನ್ನ ಅಂತರಾತ್ಮವನ್ನು ತಟ್ಟಲಿ ಎಂಬುದೇ ನನ್ನ ಉದ್ದೇಶ. ಜಗತ್ತಿನಲ್ಲಿ ಅನೇಕ ಪ್ರೀತಿಗಳು ಆಗಿ ಹೋಗಿದ್ದಾವೆ. ಅದರಲ್ಲಿ ಇಂತಹ ಬಂಧನದಲ್ಲಿ ಪ್ರೇಮಿಗಳು ಒಂದಾದರೆ ಬೆಂದಿದ್ದೇ ಹೆಚ್ಚು. ಇನ್ನಾದರೂ ತಿದ್ದಿಕೊಳ್ತಿಯಾ ನೋಡು. ಇನ್ನೂ ನಿನ್ನಿಷ್ಟ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ ನಿನ್ನ ಪ್ರೀತಿಯ ಜ್ವಾಲೆಗೆ ಸಿಕ್ಕವಳು

