ಬೆಂಗಳೂರು: ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ನಾನು ಕಚೇರಿಯಲ್ಲಿ ದಿನ ಕಾಯುತ್ತಿದ್ದು, ಯಾರೂ ರಾಜೀನಾಮೆ ಕೊಡಲು ಬಂದಿಲ್ಲ. ರಾಜೀನಾಮೆ ಕೊಡಲು ದಾರಿ ತಪ್ಪಿದ್ದರೆ ನನ್ನ ಬಳಿ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಚೇರಿಯಲ್ಲಿ ದಿನಸ ಕಾಯುತ್ತಿದ್ದೇನೆ. ಪ್ರತೀ ದಿನ ನೂರು ಕಿ.ಮೀ ಬಂದು ಕಾಯುತ್ತಿದ್ದು, ಆದರೆ ಯಾರೂ ರಾಜೀನಾಮೆ ಕೊಡಲು ಬರುತ್ತಿಲ್ಲ. ಯಾರಾದರೂ ಬಂದು ರಾಜೀನಾಮೆ ಕೊಡುತ್ತೇನೆ ಎಂದರೆ ಕಾಯುತ್ತೇನೆ. ಯಾವುದೇ ಶಾಸಕರು ಕೂಡ ಬಂದು ಅಪಾಯಿಂಟ್ಮೆಂಟ್ ಕೇಳುತ್ತಿಲ್ಲ. ಆದರೆ ಮಾಧ್ಯಮದವರೆ ಬಂದು ಅಪಾಯಿಂಟ್ಮೆಂಟ್ ಕೇಳುತ್ತಿದ್ದಾರೆ ಎಂದು ತಮಾಷೆ ಮಾಡಿದರು.
Advertisement
Advertisement
ಸ್ಪೀಕರ್ ಸಿಟ್ಟಾಗಿದ್ದಾರೆ ಅಂತೆಲ್ಲ ಹೇಳಬೇಡಿ. ನಗ್ ನಗ್ತಾ ಇದೀನಿ, ನಗ್ತಾ ಇರುತ್ತೇನೆ. ಆದರೆ ಮಾಧ್ಯಮದವರೇ ಸಿಟ್ಟು ಬರುವಂತೆ ಮಾಡುತ್ತಾರೆ ಎಂದು ನಗುತ್ತಲೆ ತಮಗೇ ಸಿಟ್ಟಿಲ್ಲ ಎಂದರು.
Advertisement
ಇದಕ್ಕೂ ಮುನ್ನ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯಾಧ್ಯ್ಷರಾದ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಭೇಟಿ ಬಗ್ಗೆ ಮಾಹಿತಿ ನೀಡಿದರು. ಶಾಸಕ ಆನಂದ್ ಸಿಂಗ್ ಎದುರು ಯಾವುದೇ ನಾಯಕರು ದೂರು ನೀಡಿಲ್ಲ. ಆದರೆ ಮಳೆಗಾಲದ ಅಧಿವೇಶನ ಬಗ್ಗೆ ಔಪಚಾರಿಕವಾಗಿ ತಿಳಿಸಲು ಆಗಿಲ್ಲ ಎಂದು ಇಬ್ಬರು ಮಾಹಿತಿ ನೀಡಿದರು. ಈ ವೇಳೆ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಪ್ರಶ್ನಿಸಿದ್ದು, ಹೌದು ಎಂದಷ್ಟೇ ಹೇಳಿದ್ದೇನೆ. ಆನಂದ್ ಸಿಂಗ್ ದೂರು ನೀಡಿದ್ದರೆ ಅದನ್ನು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿ, ರಮೇಶ್ ಜಾರಕಿಹೊಳಿ ನನ್ನನ್ನು ಸಂಪರ್ಕಿಸಿಲ್ಲ ಎಂದರು. ಅಲ್ಲದೇ ರಾಜೀನಾಮೆ ವದಂತಿ ಬಗ್ಗೆ ಕಿಡಿಕಾರಿದ ಸ್ಪೀಕರ್ ಅವರು, ಮಾಡೋದಿಕ್ಕೆ ಕೆಲಸ ಇಲ್ಲದಿರೋರು ರಾಜೀನಾಮೆ ಕೊಡುತ್ತೇನೆ ಎಂದು ಹೇಳುತ್ತಾರೆ. ಇದು ಗೌರವಸ್ಥರು ಮಾಡುವ ಕೆಲಸ ಅಲ್ಲ. ರಾಜಕಾರಣದಲ್ಲಿ ಗುಮಾನಿ, ಗುಟ್ಟು ಇರಬಾರದು. ಗುಟ್ಟಾಗಿ ಗುಮಾನಿಯಾಗಿ ಏನೇ ಮಾಡಿದರೂ ಅದು ವ್ಯಾಪಾರ ಆಗುತ್ತೆ. ಆದರೆ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾರೆ, ನಾನು ಪ್ರಜಾತಾಂತ್ರಿಕ ವ್ಯವಸ್ಥೆಯನ್ವಯ ಕೆಲಸ ಮಾಡುತ್ತಿದ್ದೇನೆ. ಯಾವುದೇ ಶಾಸಕರು ದಾರಿ ತಪ್ಪಿದ್ದರೆ ನನ್ನ ಬಳಿ ಕರೆದುಕೊಂಡು ಬನ್ನಿ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಆಪರೇಷನ್ ಕಮಲ ಆಡಿಯೋ ಬಗ್ಗೆ ಎಸ್‍ಐಟಿ ತಂಡ ರಚನೆ ವಿಳಂಬ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಸೂಕ್ತ ಸಂದರ್ಭ, ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ಸದನದ ಸ್ಪೀಕರ್ ಆಗಿರುವುದರಿಂದ ನನಗೆ ಕೆಲವೊಂದು ನಿರ್ಬಂಧಗಳಿವೆ. ನನಗೆ ಬೇರೆಯವರಂತೆ ಮಾತಾಡುವ ಸ್ವಾತಂತ್ರ್ಯ ಇಲ್ಲ ಎಂದರು.