ಬೆಂಗಳೂರು: ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಜನಪ್ರತಿನಿಧಿಗಳಿಗೆ ಸ್ವಾತಂತ್ರ್ಯವಿಲ್ಲ. ಅತೃಪ್ತ ಶಾಸಕರನ್ನು ಹೋಲ್ ಸೇಲ್ ಆಗಿ ಅನರ್ಹಗೊಳಿಸಿರೋದನ್ನ ನಾವು ಸ್ಪೀಕರ್ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಶಾಸಕ ಪಿ. ರಾಜೀವ್ ಕಿಡಿಕಾರಿದ್ದಾರೆ.
ಬಿಎಸ್‍ವೈ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನ ಸ್ಪೀಕರ್ ರಮೇಶ್ ಕುಮಾರ್ ಹೋಲ್ ಸೇಲ್ ಆಗಿ ಅನರ್ಹ ಮಾಡಿರೋದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ. ಇದು ಸಂವಿಧಾನಕ್ಕೆ ಮಾಡಿರೋ ಅಪಚಾರ. ಸ್ಪೀಕರ್ ಸುಪ್ರೀಂ ಆದೇಶವನ್ನ ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ
Advertisement
Advertisement
ಪ್ರಜಾತಂತ್ರ ವ್ಯವಸ್ತೆಯಲ್ಲಿ ಸ್ಪೀಕರ್ ಹುದ್ದೆಯನ್ನ ಇನ್ನೊಬ್ಬರ ಅನುಕೂಲಕ್ಕೆ ಬಳಸಿಕೊಂಡ ದೊಡ್ಡ ಕಪ್ಪು ಚುಕ್ಕೆಯನ್ನ ರಮೇಶ್ ಕುಮಾರ್ ಅವರು ಹೊತ್ತುಕೊಳ್ಳಬೇಕಾಗಿದೆ. ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಪಡಿಸಿ, ಆ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸುಪ್ರೀಂ ಆದೇಶಿಸಿತ್ತೇ ವಿನಾಃ ಅನರ್ಹಗೊಳಿಸಿ ಎಂದಿರಲಿಲ್ಲ. ಕಾಂಗ್ರೆಸ್, ಜನತಾದಳ ಪಕ್ಷ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿದೆ. ಸ್ಪೀಕರ್ ತೀರ್ಪನ್ನು ಸುಪ್ರೀಂ ನಿರಾಕರಿಸಿ, ಈ ವಿಚಾರದಲ್ಲಿ ಅವರಿಗೆ ಎಚ್ಚರಿಕೆ ನೀಡುತ್ತೆ ಎಂದು ನಾನು ಭಾವಿಸಿದ್ದೇನೆ ಎಂದು ರಾಜೀವ್ ಸ್ಪೀಕರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದರು.
Advertisement
ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಆಯ್ಕೆ ಆಗುವ ಬೇರೆ ಜನಪ್ರತಿನಿಧಿಗಳಿಗೆ ಅವಕಾಶವಿಲ್ಲ, ಸ್ವಾತಂತ್ರ್ಯವಿಲ್ಲ. ಜನರಿಂದ ಆಯ್ಕೆಯಾದರೂ ಅವರ ಅಣತಿಗೆ ಕುಣಿಯುವಂತವರಿಗೆ ಕಾಲ ಎನ್ನುವುದು ಮತ್ತೆ ಸಾಬೀತಾಗಿದೆ. ಈ ತೀರ್ಪು ಸಂವಿಧಾನಕ್ಕೆ, ಕಾನೂನಿಗೆ ಮಾಡದ ಅಪಚಾರವಾಗಿದೆ ಎಂದು ಸ್ಪೀಕರ್ ಹಾಗೂ ಕೈ-ದಳದ ವಿರುದ್ಧ ವಾಗ್ದಾಳಿ ನಡೆಸಿದರು.