ಮ್ಯಾಡ್ರಿಡ್: ವ್ಯಕ್ತಿಯೊರ್ವ ಆಕಸ್ಮಿಕವಾಗಿ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ತಿಳಿಯದೇ ಸತ್ತ ಇಲಿಯನ್ನು ಸೇವಿಸಿರುವ ಘಟನೆ ಸ್ಪೇನ್ನಲ್ಲಿ ನಡೆದಿದೆ.
ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್ನಿಂದ ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ
ನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ. ತರಕಾರಿಯೊಂದಿಗೆ ಇಲಿಯ ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ಹಾಕಿರುವುದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ
ಕ್ರಿಸ್ಮಸ್ ಹಬ್ಬದಂದು ತರಕಾರಿಯನ್ನು ಜುವಾನ್ ಜೋಸ್ ಖರೀದಿಸಿದ್ದರು. ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.