ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್‍ಗೆ ಪ್ರವಾಸ ಹೋಗಿದ್ದರು.
Advertisement
ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Advertisement
Advertisement
ಸ್ಪಂದನಾ ಸಾವಿನ ವಿಚಾರ ಕುರಿತಂತೆ ನಟ ಶ್ರೀಮುರಳಿ ಪ್ರತಿಕ್ರಿಯೆ ನೀಡಿದ್ದು,’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೆ. ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ. ಆಮೇಲೆ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ. ಅತ್ತಿಗೆಯ ಅಗಲಿಗೆ ಆಘಾತ ಮೂಡಿಸಿದೆ’ ಎಂದು ಹೇಳಿದರು.
Advertisement
ಸ್ಪಂದನಾ ಅವರು ಸಂಬಂಧಿಗಳ ಜೊತೆ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ವಿಜಯ ರಾಘವೇಂದ್ರ ಕೂಡ ಅವರೊಂದಿಗೆ ಭಾಗಿಯಾಗಿದ್ದರು. ನಿನ್ನೆಯಷ್ಟೇ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರಿಯಾದ ಮಾಹಿತಿ ಇನ್ನೂ ಅವರ ಕುಟುಂಬಕ್ಕೆ ತಲುಪಿಲ್ಲ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತ ಪಡಿಸಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ (Death) ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಅನೇಕ ಗಣ್ಯರು ಸತಾಪ ವ್ಯಕ್ತ ಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಯೂರಪ್ಪ, ಬಸವರಾಜ ಬೊಮ್ಮಾಯಿ, ನಟಿ-ಸಂಸದೆ ಸುಮಲತಾ ಅಂಬರೀಶ್, ನಟಿ ರಾಗಿಣಿ, ನಿರ್ದೇಶಕ ನಾಗಭರಣ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ವಿಜಯ ರಾಘವೇಂದ್ರ ಮತ್ತು ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದಿದ್ದಾರೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ. ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಆಗಿರೋದು ಯಾರು ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬದರು ನಿರೀಕ್ಷೆ ಮಾಡಿರಲಿಲ್ಲ. ಇದೊಂದ ಆಘಾತಕಾರಿ ಘಟನೆ’ ಎಂದಿದ್ದಾರೆ.
ವಿಜಯ ರಾಘವೇಂದ್ರ ಚಿತ್ರಗಳ ನಿರ್ದೇಶಕ ಹಾಗೂ ಅವರ ಪುತ್ರನಿಗೆ ನೃತ್ಯ ಹೇಳಿಕೊಡುತ್ತಿರುವ ಹಿರಿಯ ನಿರ್ದೇಶಕ ನಾಗಾಭರಣ ಮಾಧ್ಯಮಗಳ ಜೊತೆ ಮಾತನಾಡಿ, ‘ನೀವು ಆ ಸುದ್ದಿ ಹೇಳಿದ ತಕ್ಷಣ ನಾನು ಗೌರವ ಡಾಕ್ಟರೇಟ್ ಪಡೆದ ಸಂತೋಷ 100 ಪಟ್ಟು ಕುಸಿಯಿತು. ವಿಜಯ ರಾಘವೇಂದ್ರ ಕುಟುಂಬದ ಜೊತೆ ಬಹಳ ದೊಡ್ಡ ಒಡನಾಟ ಇತ್ತು. ಚಿನ್ನಾರಿ ಮುತ್ತ ಸಿನೆಮಾದಿಂದ ವಿಜಯ ರಾಘವೇಂದ್ರ ಬೆಳವಣಿಗೆ ಕಂಡವನು. ನನ್ನ ಚಿನ್ನಾರಿ ಮುತ್ತನನ್ನು ಅವನಲ್ಲಿ ಕಂಡಿದ್ದೆ. ಆ ಸುದ್ದಿ ಕೇಳಿ ನನಗೆ ನಿಜವಾಗಿಯೂ ಶಾಕ್ ಆಗಿದೆ’ ಎಂದು ತುಮಕೂರಿನಿಂದ ಮಾತನಾಡಿದ್ದಾರೆ.
ತೀವ್ರ ಹೃದಯಾಘಾತದಿಂದ ನಿಧನರಾಗಿರುವ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಟಿ ಹಾಗೂ ನಿರ್ಮಾಪಕಿಯೂ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿದ್ದ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಜೊತೆಗೆ ಪತಿ ವಿಜಯ ರಾಘವೇಂದ್ರ ನಟಿಸಿದ್ದ ‘ಕಿಸ್ಮತ್’ ಚಿತ್ರಕ್ಕೆ ಸ್ಪಂದನಾ ನಿರ್ಮಾಪಕಿ. 2018ರಲ್ಲಿ ತೆರೆ ಕಂಡಿದ್ದ ಈ ಸಿನಿಮಾಗೆ ಸ್ಪಂದನಾ ಹಣ ಹೂಡಿದ್ದರು. ಪತಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ನಟನೆಯನ್ನು ವೃತ್ತಿಯಾಗಿ ಸ್ವೀಕಾರ ಮಾಡದೇ ಇದ್ದರೂ, ಕಲಾವಿದರಿಗೆ ಸ್ಪಂದನಾ ಸಾಕಷ್ಟು ಗೌರವವನ್ನು ನೀಡುತ್ತಿದ್ದರು.
ಸ್ಪಂದನಾ ಅಸಿಸ್ಟೆಂಟ್ ಪೊಲೀಸ್ ಕಮಿಷ್ನರ್ ಬಿ.ಕೆ. ಶಿವರಾಮ್ ಅವರ ಮಗಳು. ಆನಂತರ ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಆಗಸ್ಟ್ 26, 2007ರಲ್ಲಿ ಮದುವೆಯಾಗಿದ್ದರು. ಇದೊಂದು ಅಪರೂಪದ ಜೋಡಿ ಎಂದೇ ಬಣ್ಣಿಸಲಾಗುತ್ತಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೆಂಡತಿಯನ್ನು ಸಾಕಷ್ಟು ಕೊಂಡಾಡಿದ್ದರು ವಿಜಯ ರಾಘವೇಂದ್ರ. ತಮ್ಮ ಪ್ರೀತಿಯ ದಿನಗಳನ್ನೂ ಅವರು ಮೆಲುಕು ಹಾಕಿದ್ದರು.
ಸ್ಪಂದನಾ ಮತ್ತು ವಿಜಯ ರಾಘವೇಂದ್ರ ದಂಪತಿಗೆ ಮುದ್ದಾದ ಒಬ್ಬ ಮಗನಿದ್ದಾನೆ. ಅವನಿಗೆ ಅಭಿಮಾನಿದಂದಲೇ ಶೌರ್ಯ ಎಂದು ಹೆಸರಿಟ್ಟಿದ್ದರು ದಂಪತಿ. ಶೌರ್ಯ ಇದೀಗ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
Web Stories