ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ಸೋಮವಾರ ಹೃದಯಾಘಾತದಿಂದಾಗಿ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ.
ಕಾಲೇಜು ಸ್ನೇಹಿತರೊಂದಿಗೆ ಥಾಯ್‌ಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ (Spandana) ಭಾನುವಾರ ಶಾಪಿಂಗ್‌ಗೆ ಹೊರಟಿದ್ದರು. ಸಂಜೆ ಶಾಪಿಂಗ್ ಮುಗಿಸಿ ಹೋಟೆಲ್ ನತ್ತ ಹೋಗ್ಬೇಕಾದ್ರೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಪಂದನಾ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ
2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವಾರ್ಷಿಕೋತ್ಸವಕ್ಕೆ ಇನ್ನು 19 ದಿನಗಳಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಅನಾಹುತ ಸಂಭವಿಸಿದೆ. ಸದ್ಯ ಜಕ್ಕೂರಿನಲ್ಲಿರುವ ವಿಜಯ ರಾಘವೇಂದ್ರ ಅವರ ಅಪಾರ್ಟ್ಮೆಂಟ್ ಖಾಲಿ ಖಾಲಿಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಯಲಹಂಕ ಪೊಲೀಸರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ- ವಿಜಯ್ ಪತ್ನಿ ಸ್ಪಂದನಾ ಹಠಾತ್ ನಿಧನ
ಕಾಫಿ ಢೇ ನಲ್ಲಿ ಪ್ರೀತಿ-ಶುರುವಾದ ರೀತಿ:
2004ರಲ್ಲಿ ಮಲ್ಲೇಶ್ವರದ ಕಾಫಿ ಡೇನಲ್ಲಿ ವಿಜಯ್ -ಸ್ಪಂದನಾ ಇಬ್ಬರ ಮೊದಲ ಪರಿಚಯವಾಗಿತ್ತು. ಅದಾದ ಮೂರು ವರ್ಷಗಳ ಬಳಿಕ ಮತ್ತೆ ಅದೇ ಕಾಫಿ ಡೇನಲ್ಲಿ ಮತ್ತೆ ಭೇಟಿ ಮಾಡಿದ್ದರು. ಆಗ ವಿಜಯ ರಾಘವೇಂದ್ರ ಸ್ಪಂದನಾರನ್ನ ಪರಿಚಯ ಮಾಡಿಕೊಂಡು ಮಾತನಾಡಿಸಿದ್ದರು. ಬಳಿಕ ಮದುವೆ ಮಾತುಕತೆ ನಡೆದಿತ್ತು. ಆಗ ಎಂಇಎಸ್ ಕಾಲೇಜಿನಲ್ಲಿ ಫೈನಲ್ ಬಿ.ಎ ವ್ಯಾಸಂಗ ಮಾಡುತ್ತಿದ್ದ ಸ್ಪಂದನಾ ವಿಜಯ ರಾಘವೇಂದ್ರ ಜೊತೆಗೆ 2007ರಲ್ಲಿ ಆಗಸ್ಟ್ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]