ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ (Vijay Raghavendra) ಪತ್ನಿ ಸ್ಪಂದನಾ (Spandana) ಅಸ್ತಿ ವಿಸರ್ಜನೆ ಕಾರ್ಯ ನಾಳೆ (ಆಗಸ್ಟ್ 11)ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎಂದು ವಿಜಯ ಆಪ್ತರ ವಲಯದಿಂದ ಮಾಹಿತಿ ತಿಳಿಸಿದೆ.
ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮನೆಯ ಬೆಳಕು ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 3ನೇ ದಿನದ ಕಾರ್ಯ, ಅಸ್ತಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.