ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

Public TV
2 Min Read
Shubhanshu Shukla 3

– ಗಗನಯಾನಿಗಳನ್ನ ಹೊತ್ತು ಹಾರಲಿದೆ SpaceX ನ ʻಡ್ರ್ಯಾಗನ್ʼ

ನವದೆಹಲಿ: ಬಾಹ್ಯಾಕಾಶ ಪ್ರಯಾಣದಲ್ಲಿ ಮೈಲಿಗಲ್ಲು ಸಾಧಿಸಲು ಭಾರತ ಸಜ್ಜಾಗಿದೆ. ಗಗನಯಾತ್ರಿ ಅಥವಾ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಜೂನ್‌ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಹಾರಲಿದ್ದಾರೆ. ಶುಕ್ಲಾ ಅವರೊಂದಿಗೆ ಮೂವರು ಗಗನಯಾನಿಗಳು ಸಹ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆ.

ಇದಕ್ಕಾಗಿ ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌-ಎಕ್ಸ್‌ (SpaceX) ಸಂಸ್ಥೆಯು ʻಡ್ರ್ಯಾಗನ್ʼ (Dragon) ಎಂಬ ಬಾಹ್ಯಾಕಾಶ ನೌಕೆಯನ್ನೂ ಸಿದ್ಧಪಡಿಸಿದ್ದು, ಉಡಾವಣೆಗೆ ಸಜ್ಜುಗೊಳಿಸಲಾಗಿದೆ. ಈ ಡ್ರ್ಯಾಗನ್‌ ನೌಕೆಯನ್ನು ಸ್ಪೆಸ್‌-ಎಕ್ಸ್‌ ಮರುಬಳಕೆ ಮಾಡಬಹುದಾದ ಫಾಲ್ಕನ್‌-9 ರಾಕೆಟ್‌ನಲ್ಲಿ ಸಂಯೋಜಿಸಿದೆ. ಇದನ್ನೂ ಓದಿ: ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?

ʻಆ್ಯಕ್ಸಿಯಂ-4ʼ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್ ಯು.ವಿವ್‌ಕಿ ಕೂಡ ಪಯಣಿಸಲಿದ್ದಾರೆ. ಒಟ್ಟು 14 ದಿನಗಳ ಕಾರ್ಯಾಚರಣೆ ಇದಾಗಿದೆ. ಅಂದಾಜು 28 ಗಂಟೆ ಪ್ರಯಾಣದ ಬಳಿಕ, ಜೂನ್ 11ರಂದು ಭಾರತೀಯ ಕಾಲಮಾನ ರಾತ್ರಿ 10.30ರ ವೇಳೆಗೆ ನಾಲ್ವರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ. ಇದನ್ನೂ ಓದಿ: ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

Shubhanshu Shukla

ಜೂನ್ 11ರಂದು ತಡರಾತ್ರಿ 12.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30) ಡ್ರಾಗನ್ ಗಗನನೌಕೆಯನ್ನು ಐಎಸ್‌ಎಸ್‌ನೊಂದಿಗೆ ಜೋಡಣೆ (ಡಾಕಿಂಗ್) ಮಾಡಲಾಗುವುದು ಎಂದು ನಾಸಾ (NASA) ತಿಳಿಸಿದೆ. ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿ, ʻಆ್ಯಕ್ಸಿಯಂ-4ʼ ಬಾಹ್ಯಾಕಾಶ ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ನಡೆಸಿದ್ದರು.

1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. ಅದಾದಮೇಲೆ 41 ವರ್ಷಗಳ ಬಳಿಕ, ಭಾರತ ಸರ್ಕಾರ ಮತ್ತೊಬ್ಬ ಗಗನಯಾನಿಯನ್ನ ಅಂತರಿಕ್ಷಕ್ಕೆ ಕಳುಹಿಸುತ್ತಿರುವುದು ಗಮನಾರ್ಹ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

Shubhanshu Shukla 2

ಗ್ರೂಪ್ ಕ್ಯಾಪ್ಟನ್ ಶುಕ್ಲಾ 40 ವರ್ಷ ವಯಸ್ಸಿನವರಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಗಗನಯಾತ್ರಿಗಳಲ್ಲಿ ಅತ್ಯಂತ ಕಿರಿಯರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಿದೆ. ಇದನ್ನೂ ಓದಿ: ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

ಗಮನಿಸಬೇಕಾದ ಮುಖ್ಯಾಂಶಗಳು
* ನಾಲ್ವರು ಗಗನಯಾನಿಗಳು ಮೇ 25ರಿಂದ ಪ್ರತ್ಯೇಕವಾಸದಲ್ಲಿ (ಕ್ವಾರಂಟೈನ್) ಇದ್ದಾರೆ.
* 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಗಳೂ ಇವೆ.
* ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ.
* ಶುಕ್ಲಾ ಅವರ ಬಾಹ್ಯಾಕಾಶ ಅನುಭವವನ್ನು ಉದ್ದೇಶಿತ ಗಗನಯಾನ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಇಸ್ರೋ ಯೋಜಿಸಿದೆ.
* ಆ್ಯಕ್ಸಿಯಂ-4 ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಇಸ್ರೋ 550 ಕೋಟಿ ರೂ. ವೆಚ್ಚ ಮಾಡಲಿದೆ.

Share This Article