ವಾಷಿಂಗ್ಟನ್: ವಿಶ್ವದ ಶ್ರೀಮಂತ, ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ತನ್ನ ನಡವಳಿಕೆಯನ್ನು ಟೀಕಿಸಿದ ಉದ್ಯೋಗಿಗಳನ್ನು ಕಂಪನಿಯಿಂದ ಕಿತ್ತೊಗೆದಿದ್ದಾರೆ ಎಂದು ವರದಿಯಾಗಿದೆ.
ಮಸ್ಕ್ ಅವರ ನಡವಳಿಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಉದ್ಯೋಗಿಗಳು ಟೀಕಿಸಿದ್ದು, ಈ ಹಿನ್ನೆಲೆ ಟೀಕಿಸಿರುವ ಸ್ಪೇಸ್‌ಎಕ್ಸ್‌ನ ಉದ್ಯೋಗಿಗಳನ್ನೇ ವಜಾ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ
Advertisement
Advertisement
ಇತ್ತೀಚೆಗೆ ಸ್ಪೇಸ್‌ಎಕ್ಸ್‌ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ. ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ
Advertisement
Advertisement
ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ನೆ ಶಾಟ್‌ವೆಲ್ ಈ ಪತ್ರವನ್ನು ರಚಿಸಿರುವ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಬಗ್ಗೆ ಸ್ಪೇಸ್‌ಎಕ್ಸ್ ಅಧಿಕೃತ ವಿವರವನ್ನು ನೀಡಿಲ್ಲ. ಯಾರೆಲ್ಲಾ ಹಾಗೂ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದನ್ನೂ ಬಹಿರಂಗ ಪಡಿಸಿಲ್ಲ.