ಲಕ್ನೋ: ವಿಧಾನಸಭೆಯಲ್ಲಿ ಅಧಿವೇಶನ (Assembly) ನಡೆಯುತ್ತಿದ್ದಾಗ ಉತ್ತರ ಪ್ರದೇಶದ (UttarPradesh) ಬಿಜೆಪಿ ಶಾಸಕರು ತಂಬಾಕು (Tobacco) ಸೇವನೆ ಮತ್ತು ಗೇಮ್ (Game) ಆಡಿದ್ದಾರೆ.
सदन की गरिमा को तार-तार कर रहे भाजपा विधायक!
महोबा से भाजपा विधायक सदन में मोबाइल गेम खेल रहे, झांसी से भाजपा विधायक तंबाकू खा रहे।
इन लोगों के पास जनता के मुद्दों के जवाब हैं नहीं और सदन को मनोरंजन का अड्डा बना रहे।
बेहद निंदनीय एवं शर्मनाक ! pic.twitter.com/j699IxTFkp
— Samajwadi Party (@samajwadiparty) September 24, 2022
ಈ ಇಬ್ಬರು ಶಾಸಕರ ವೀಡಿಯೋವನ್ನು ಸಮಾಜವಾದಿ ಪಕ್ಷ (Samajwadi Party) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶಾಸಕರ ಅಶಿಸ್ತನ್ನು ಖಂಡಿಸಿದೆ. ಮಹೋಬಾದ (Mahoba) ಬಿಜೆಪಿ ಶಾಸಕ ರಾಕೇಶ್ ಗೋಸ್ವಾಮಿ (Rakesh Goswami) ಮೂರು ಎಲೆಗಳಿರುವ ಇಸ್ಪೀಟ್ ಗೇಮ್ ಆಡಿದ್ದರೆ, ಝಾನ್ಸಿ (Jhansi) ಶಾಸಕ ರವಿಕುಮಾರ್ ಶರ್ಮಾ (Ravi Sharmar Sharma) ಅವರ ಟೇಬಲ್ ಕೆಳಗೆ ಮುಚ್ಚಿಟ್ಟುಕೊಂಡು ತಂಬಾಕು ತಿಂದಿದ್ದಾರೆ. ಶಾಸಕರ ವರ್ತನೆಯಿಂದ ಬಿಜೆಪಿ ಪಕ್ಷ ಮುಜುಗರಕ್ಕೆ ಒಳಗಾಗಿದೆ. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ
ಗುರುವಾರದ ಸದನದಲ್ಲಿ ಮಹಿಳೆಯರ ವಿಶೇಷ ದಿನವಾಗಿ ಆಚರಿಸಲಾಗಿತ್ತು. ಈ ವಿಶೇಷ ದಿನದಂದೇ ಬಿಜೆಪಿ ಶಾಸಕರು ಅಶಿಸ್ತು ತೋರಿಸಿದ್ದಾರೆ. ಇದನ್ನೂ ಓದಿ: ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ