ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‍ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಇಂದು ಬಿಡುಗಡೆಯಾಗಿದ್ದಾರೆ.
ಹೌದು, ಸುಮಾರು 27 ತಿಂಗಳ ಸೆರೆವಾಸದ ಬಳಿಕ ಕೊನೆಗೂ ಅಜಂ ಖಾನ್‍ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಉತ್ತರಪ್ರದೇಶದ ರಾಂಪುರದ ಕೊತ್ವಾಲಿ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅವರಿಗೆ ಈ ಜಾಮೀನನ್ನು ಸುಪ್ರೀಂ ಕೋರ್ಟ್ ನೀಡಿದೆ.
Advertisement
Advertisement
ಫೆಬ್ರವರಿ 2020 ರಿಂದ ಜೈಲಿನಲ್ಲಿರುವ ಖಾನ್ ವಿರುದ್ಧ ಇದು 88 ಪ್ರಕರಣಗಳಿದ್ದು, ವಿಚಾರಣಾ ನ್ಯಾಯಾಲಯದಿಂದ 88 ಪ್ರಕರಣಗಳಿಗೂ ಜಾಮೀನು ಪಡೆದುಕೊಂಡಿದ್ದಾರೆ. 89ನೇ ಪ್ರಕರಣದಲ್ಲಿ ಜಾಮೀನಿಗೆ ವಿಚಾರಣೆ ಪ್ರಾರಂಭವಾಗುವ ಮುನ್ನ ಸುಪ್ರೀಂಕೋರ್ಟ್ ಆರ್ಟಿಕಲ್ 142 ಮೂಲಕ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್‍ಗೆ ಶಾಕ್ ಕೊಟ್ಟ ಸಿಬಿಐ – ಲಾಲು, ಪುತ್ರಿ ನಿವಾಸದ ಮೇಲೆ ದಾಳಿ
Advertisement
#WATCH | Samajwadi Party leader Azam Khan released from Sitapur district jail, in a matter concerning Kotwali PS in Rampur pic.twitter.com/2TDWwFHi4W
— ANI UP/Uttarakhand (@ANINewsUP) May 20, 2022
Advertisement
ಇತ್ತೀಚೆಗೆ ರಾಂಪುರ ಪಬ್ಲಿಕ್ ಸ್ಕೂಲ್‍ನ ಭೂ ಕಬಳಿಕೆ ಮತ್ತು ಶಾಲೆಗೆ ಮಾನ್ಯತೆ ಪಡೆಯಲು ಕಟ್ಟಡದ ಪ್ರಮಾಣಪತ್ರಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪವನ್ನು ಅಜಂ ಖಾನ್ ಮೇಲೆ ಹೊರಿಸಲಾಗಿತ್ತು. ಇದನ್ನೂ ಓದಿ: ಮುಂದುವರಿದ ಮಳೆ ಅಬ್ಬರ: ಉಡುಪಿ, ಶಿವಮೊಗ್ಗ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ
Uttar Pradesh | Samajwadi Party leader Azam Khan released from Sitapur district jail, in a case of cheating relating to Kotwali PS in Rampur pic.twitter.com/vaImh2By4R
— ANI UP/Uttarakhand (@ANINewsUP) May 20, 2022
ಇದೀಗ ಅಜಂ ಖಾನ್ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅವರನ್ನು ಬರಮಾಡಿಕೊಳ್ಳಲು ಪಕ್ಷದ ಬೆಂಬಲಿಗರು ಬೆಳ್ಳಂಬೆಳಗ್ಗೆ ಸೀತಾಪುರ ಜೈಲಿನ ಬಳಿ ಜಮಾಯಿಸಿ ಜೈಕಾರ ಕೂಗಿದರು. ಅವರ ಪುತ್ರರಾದ ಅಬ್ದುಲ್ಲಾ ಮತ್ತು ಅದೀಬ್ ಸಹ ಜೈಲಿನ ಬಳಿ ಆಗಮಿಸಿ ತಂದೆಯನ್ನು ಸ್ವಾಗತಿಸಿದರು.