ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಗಾಡಿಗಳನ್ನ ಪಾರ್ಕ್ ಮಾಡ್ತಿದ್ದ ವಾಹನ ಚಾಲಕರ ವಿರುದ್ಧ ಎಸ್‍ಪಿ ಅಣ್ಣಾಮಲೈ ಇಂದು ರೆಬೆಲ್ ಆಗಿದ್ರು. ಗಾಡಿ ಪಾರ್ಕಿಂಗ್‍ನಿಂದ ಟ್ರಾಫಿಕ್‍ನಲ್ಲಿ ತೊಂದರೆ ಕೊಡ್ತಿದ್ದ ವಾಹನವನ್ನ ಅಣ್ಣಾಮಲೈ ಅವರೇ ಖುದ್ದು ಕ್ರೇನ್‍ಗೆ ಕಟ್ಟಿ ಠಾಣೆಗೆ ಎಳೆದೊಯ್ದದ್ರು.
ಇಂದು ನಗರದ ಎಂಜಿ ರಸ್ತೆಗೆ ದಿಢೀರನೆ ಭೇಟಿ ಕೊಟ್ಟ ಎಸ್‍ಪಿ ಅಣ್ಣಾಮಲೈ ವಾಹನ ಸವಾರರು ರಾಂಗ್ ವೇನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಫೈನ್ ಹಾಕಿದ್ರು. ಎಸ್‍ಪಿಯ ದಿಢೀರ್ ಭೇಟಿಯಿಂದ ಶಾಕ್ ಆದ ಇತರೆ ವಾಹನ ಚಾಲಕರು ರಾಂಗ್ ಪ್ಲೇಸ್‍ನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳನ್ನ ತೆಗೆಯಲು ಅಲ್ಲಿಂದ ಕಾಲ್ಕಿತ್ರು.
Advertisement
Advertisement
ಹಲವು ದಿನಗಳಿಂದ ಚಿಕ್ಕಮಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್‍ನಿಂದಾಗ್ತಿರೋ ತೊಂದರೆ ಕುರಿತು ಸಾರ್ವಜನಿಕರಿಂದ ಹಲವು ಫೋನ್ ಕರೆಗಳು ಬಂದ ಹಿನ್ನೆಲೆಯಲ್ಲಿ ಇಂದು ಸ್ವತಃ ಎಸ್‍ಪಿಯೇ ಖುದ್ದಾಗಿ ವಾಹನ ಮಾಲೀಕರಿಗೆ ಶಾಕ್ ಕೊಟ್ರು.
Advertisement
ನಾಳೆಯಿಂದ ಅಂಗಡಿ ಮುಂದೆ, ರಾಂಗ್ ಪ್ಲೇಸ್‍ನಲ್ಲಿ ನಿಲ್ಲೋ ವಾಹನಗಳ ಜವಾಬ್ದಾರಿ ಅಂಗಡಿ ಮಾಲೀಕರದ್ದೇ ಎಂದು ಅಣ್ಣಾಮಲೈ ಎಚ್ಚರಿಸಿದ್ದಾರೆ.